ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್ನ್ನು ಬಿಜೆಪಿ 20 ಮತ್ತು ತಾಲೂಕು ಪಂಚಾಯತ್ನಲ್ಲಿ ಬಿಜೆಪಿ 27 ಸ್ಥಾನವನ್ನು ಗೆಲ್ಲುವ ಮೂಲಕ ಕರಾವಳಿ ಭಾಗದಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ .
ಕಾಂಗ್ರೇಸ್ ಜಿಲ್ಲಾ ಜಿಲ್ಲಾ ಪಂಚಾಯತ್ನಲ್ಲಿ 6 ಮತ್ತು ತಾಲೂಕು ಪಂಚಾಯತ್ನಲ್ಲಿ 14 ಸ್ಥಾನವನ್ನು ಪಡೆದು ಕೊಂಡಿದೆ. ಕಳೆದರ ಬಾರಿ ತಾಪಂನಲ್ಲಿ 23 ಸ್ಥಾನ ಬಿಜೆಪಿ ಗಳಿಸಿದರೆ, ಕಾಂಗ್ರೇಸ್ 18 ಸ್ಥಾನ ಪಡೆದಿತ್ತು.
ಆದರೆ ಈ ಬಾರಿ 4 ಸ್ಥಾನಗಳನ್ನು ಕಾಂಗ್ರೇಸ್ ಕಳೆದು ಕೊಳ್ಳುವ ಮೂಲಕ ಹೀನಾಯ ಸೋಲುನ್ನು ಮತ್ತು ತೀವ್ರ ಮುಖಭಂಗವನ್ನು ಅನುಭವಿಸಿದೆ. ರಾಜ್ಯದ ನಗರಾಭಿವೃದ್ಧಿ ಸಚಿವರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿ ಶಕ್ತಿ ವರ್ಧಿಸುತ್ತಿದೆ.
ಒಂದೆಡೆ ಬಿಜೆಪಿ ಬಲಗೊಳ್ಳುತ್ತಿದ್ದು ಮತ್ತೊಂದೆಡೆ ಕಾಂಗ್ರೇಸ್ನ ಜಯಪ್ರಕಾಶ್ ಹಗ್ಡೆಯಂತ ನಾಯಕ ಬಂಡಾಯ ಕಾಂಗ್ರೇಸ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಎಂಬುದು ಈ ಚುನಾವಣೆ ಸಾಬೀತು ಪಡಿಸಿದೆ .
ಕರಾವಳಿ ಭಾಗದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರ ತನ್ನ ಆಯ್ಕೆಯನ್ನು ಸ್ಪಷ್ಟವಾಗಿ ತಿಳಿಸಿದೆ. ಈ ಮೂಲಕ ತನ್ನ ಭದ್ರಕೋಟೆಯನ್ನು ಮರಳಿ ಪಡೆವತ್ತ ಬಿಜೆಪಿ ಧಾಪುಗಾಲಿಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.