ಅಲಿಘಢ: ಜನಗಣದ ಬದಲು ’ವಂದೇ ಮಾತರಂ’ ಅಥವಾ ’ಝಂಡಾ ಊಂಚಾ ರಹೇ ಹಮಾರಾ’ ದೇಶದ ರಾಷ್ಟ್ರಗೀತೆಯಾಗಬೇಕು ಎಂದು ಖ್ಯಾತ ಹಿಂದಿ ಕವಿ ಗೋಪಾಲ್ ದಾಸ್ ’ನೀರಜ್’ ಹೇಳಿದ್ದಾರೆ.
‘ಜನ ಗಣ ಮನ’ವನ್ನು ಬರೆದ ರವೀಂದ್ರನಾಥ ಠಾಗೋರರು ಭಾರತದಲ್ಲಿ ಬ್ರಿಟಿಷ್ ಆಡಳಿತದ ಪರವಾಗಿದ್ದರು, ಬ್ರಿಟಿಷರನ್ನು ಓಲೈಸುವುದಕ್ಕಾಗಿಯೇ ಅವರು ಈ ಪದ್ಯವನ್ನು ರಚಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೊಲೋನಿಯಲ್ ಹ್ಯಾಂಗೋವರ್ನಿಂದಾಗಿಯೇ ಇಂಗ್ಲೀಷ್ನಲ್ಲಿ ಬರೆಯುವವರನ್ನು ದೊಡ್ಡವರು ಮತ್ತು ಬೇರೆ ಭಾಷೆಯಲ್ಲಿ ಬರೆಯುವವರನ್ನು ಸಣ್ಣವರು ಎಂದು ಗುರುತಿಸಲಾಯಿತು ಎಂದು 92 ವರ್ಷ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನೀರಜ್ ಹೇಳಿದ್ದಾರೆ.
1911ರಲ್ಲಿ ಠಾಗೋರರು ಬ್ರಿಟಿಷಿಗ ಜಾರ್ಜ್ ವಿ. ಯನ್ನು ಹೊಗಳುವ ಸಲುವಾಗಿ ಜನ ಗಣ ಮನವನ್ನು ರಚಿಸಿದರು ಎಂದು ಅವರು ಹೇಳಿದ್ದಾರೆ. ಭಾರತ ಭಾಗ್ಯ ವಿದಾತ ಎಂದು ಬ್ರಿಟಿಷರನ್ನೇ ಅವರು ಕರೆದಿದ್ದು, ಹಾಡಿನಲ್ಲಿ ಬರುವ ಸಿಂಧ್ ಈಗ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.