ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಉಮರ್ ಖಲೀದ್ ಇದುವರೆಗೆ ಪೊಲೀಸರ ಕೈಗೆ ಸಿಕ್ಕದೆ ತಲೆಮರೆಸಿಕೊಂಡಿದ್ದಾನೆ.
ಇದೀಗ ಹೇಳಿಕೆ ನೀಡಿರುವ ಆತನ ತಂದೆ, ಕೇಂದ್ರ ಗೃಹಸಚಿವರಾದ ರಾಜನಾಥ್ ಸಿಂಗ್ ಅವರು ನನ್ನ ಮಗನ ಭದ್ರತೆಯ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದರೆ ಖಂಡಿತಾ ಅವನು ಪೊಲೀಸರ ಮುಂದೆ ಶರಣಾಗುತ್ತಾನೆ ಎಂದಿದ್ದಾರೆ.
ನನ್ನ ಮಗನ ಬದುಕು ಅಪಾಯದಲ್ಲಿದೆ ಎಂದಿರುವ ಅವರು, ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಆದರೆ ಈಗಿನ ವಾತಾವರಣದಲ್ಲಿ ಕೋರ್ಟ್ ಆವರಣವೂ ಸುರಕ್ಷಿತವಾಗಿಲ್ಲ ಎಂದಿದ್ದಾರೆ.
ಮೊದಲು ಸುರಕ್ಷಿತ ವಾತಾವರಣ ಸೃಷ್ಟಿಸಿ, ಮಗನ ಭದ್ರತೆಯ ಭರವಸೆ ನೀಡಿ ಆಗ ಮಾತ್ರ ಖಲೀದ್ ಶರಣಾಗುತ್ತಾನೆ ಎಂದಿದ್ದಾರೆ.
ಖಲೀದ್ ಜೆಎನ್ಯುನ 20 ದೇಶದ್ರೋಹಿಗಳ ಪೈಕಿ ಒಬ್ಬ. ಪೋಸ್ಟರ್ಗಳಲ್ಲೂ ಈತನ ಹೆಸರಿತ್ತು. ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.