Thursday, February 18th, 2016
News13
ಬೆಳ್ತಂಗಡಿ : ಫೆ. 20 ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಗುರುವಾರ ಪಥ ಸಂಚಲನ ನಡೆಯಿತು.
ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಪಥ ಸಂಚಲನಗಳನ್ನು ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಳದಂಗಡಿ, ಉಜಿರೆ, ಗುರುವಾನಕೆರೆ, ಬೆಳ್ತಂಗಡಿ ಮೊದಲಾದ ಪ್ರದೇಶಗಳಲ್ಲಿ ಪಥ ಸಂಚಲನಗಳನ್ನು ನಡೆಸಿದರು.
ಬೆಳ್ತಂಗಡಿ ಸರ್ಕಲ್ಇನ್ಸ್ಪೆಕ್ಟರ್ ಬಿ.ಆರ್. ಲಿಂಗಪ್ಪಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಎಸ್ಐ ಸಂದೇಶ್, ಧರ್ಮಸ್ಥಳ ಎಸ್ಐ ಮಾಧವಕೂಡ್ಲು, ಪುಂಜಾಲಕಟ್ಟೆಎಸ್ಐ ಲತೇಶ್, ವೇಣೂರುಎಸ್ಐ ವಿನಾಯಕ ಬಿಲ್ಲವಅವರ ನೇತೃತ್ವದಲ್ಲಿ ನಡೆಯಿತು.