ಸುಮಾರು 9ತಿಂಗಳ ಹಿಂದೆ ಪುತ್ತೂರಿನ ವಿದ್ಯಾರ್ಥಿಯೊಬ್ಬಳು SSLC 1st ಕ್ಲಾಸಿನಲ್ಲಿ ಪಾಸ್ ಆಗಿದ್ದಳು ಆದರೆ ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಮನೆಯಲ್ಲಿ ತೀವ್ರವಾದ ಆರ್ಥಿಕ ಅಡಚಣೆ ಇದನ್ನು ತಿಳಿದ ಆ ವಿದ್ಯಾರ್ಥಿನಿಯ ಸಂಬಂಧಿಯೊಬ್ಬರು ತಾನಿದ್ದ Whatsapp ಗ್ರೂಪಿನಲ್ಲಿ ಮೇಲಿಂದ ಮೇಲೆ ಈ ಬಗ್ಗೆ ಸಹಾಯಯಾಚಿಸ ತೊಡಗಿದ ಆದರೆ ಇದಕ್ಕೆ ಸ್ಪಂದಿಸಿದ್ದು ಶಿವು ಪುತ್ತೂರು ಮತ್ತು ಅವರ ಗೆಳೆಯರು.
ಈ ಹೆಣ್ಣುಮಗಳನ್ನು ಹೇಗಾದರೂ ಮಾಡಿ ಕಾಲೇಜಿಗೆ ಸೇರಿಸಬೇಕೆಂದು ನಿಶ್ಚಯಿಸಿದ ಈ ಯುವಕರು ತಮ್ಮ ಸಂಪಾದನೆಯ ಒಂದು ಭಾಗ ಮತ್ತು ತಮ್ಮ ಬಂಧು ಮಿತ್ರರನ್ನು ಬೇಡಿ ಅವಳ ಕಾಲೇಜ್ ಅಡ್ಮಿಶನಿಗೆ ಬೇಕಾದ ಮೊತ್ತವನ್ನು ಹೊಂದಿಸಿ ಆಕೆಯನ್ನು ಕಾಲೇಜಿಗೆ ಸೇರಿಸಿದರು. ಆ ಸಮಯದಲ್ಲಿ ಆಕೆಯ ಖುಷಿಯನ್ನು ಕಂಡು ಈ ಯುವಕರಿಗೆ ಏನೋ ಧನ್ಯತಾ ಭಾವ!!! ಮೊದಲ ಬಾರಿಗೆ ಇಂತಹ ಅದೇನೋ ಸಾಧಿಸಿದ ಸಂತೃಪಿ!!! ಮನಸ್ಸಿನಲ್ಲಿ ಈ ರೀತಿಯ ಕಾರ್ಯ ಯಾಕೆ ಮುಂದುವರಿಸಬಾರದು ಎಂಬ ಆಲೋಚನೆ ಬಂದದೇ ದಕ್ಷಿಣಕನ್ನಡದಲ್ಲಿ Whatsapp ಎಂಬ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಿದ “ಹಿಂದೂ ವಾರಿಯರ್ಸ್” Whatsapp ಗ್ರೂಪಿನ ಉದಯಕ್ಕೆ ಕಾರಣವಾಯಿತು.
ಮೊದಲ ಈ ಸೇವಾ ಯೋಜನೆಯ ನಂತರ ಈ ಗುಂಪನ್ನು ವಿಸ್ತಾರಿಸಬೇಕೆಂದು ಆಲೋಚನೆ ಮಾಡಿದ ಶಿವು ಪುತ್ತೂರು ಮತ್ತು ಅವರ ಗೆಳೆಯರು ತಮ್ಮ ಸಂಪರ್ಕದಲ್ಲಿದ್ದ ಸಾಮಾಜಿಕ ಕಳಕಳಿಯುಳ್ಳ ಸ್ನೇಹಿತರನ್ನು ಗ್ರೂಪಿಗೆ add ಮಾಡಿದರು ಇದೇ ಹೊತ್ತಿಗೆ ಮತ್ತೊಂದು ಹೆಣ್ಣು ಮಗಳು ಕಾಲೇಜಿಗೆ ಸೇರಿಕೊಳ್ಳಲು ಸಾಧ್ಯವಾಗದೆ ಈ ಗುಂಪಿನ ಸದಸ್ಯರನ್ನು ಸಂಪರ್ಕಿಸಿದಳು ಈ ಬಾರಿ ಮೊದಲಿಗಿಂತ ಹೆಚ್ಚಿನ ಮೊತ್ತ ಸಂಗ್ರಹವಾಯಿತು. ಈ ಬಾರಿ ಮಾಧ್ಯಮದ ಮಿತ್ರರು ಹಿಂದೂ ವಾರಿಯರ್ಸ್” Whatsapp ಗ್ರೂಪಿನ ಈ ಅದ್ಭುತ ಕಾರ್ಯಕ್ಕೆ ಶ್ಲಾಘಿಸಿ ಸಣ್ಣ ಮಟ್ಟದ ಪ್ರಚಾರವನ್ನು ನೀಡಿದರು. ಇದನ್ನು ಗಮನಿಸಿದ ಸಮಾಜದಲ್ಲಿರುವ ಸಹೃದಯಿ ದಾನಿಗಳು ಮುಂದಿನ ಸೇವಾ ಯೋಜನೆಗಳಲ್ಲಿ ಹಿಂದೂ ವಾರಿಯರ್ಸ್” Whatsapp ಗ್ರೂಪಿನೊಂದಿಗೆ ಕೈಜೋಡಿಸಲು ಮುಂದೆ ಬಂದರು. ಹಿಂದೂ ವಾರಿಯರ್ಸ್ ಎಂಬ ಹೆಸರಿನೊಂದಿಗೆ Whatsapp ಎಂಬ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಸಾಮಾಜಿಕ ಕಳಕಳಿಯುಳ್ಳ ಈ ಗುಂಪಿನ ಸದಸ್ಯರ ಬಗ್ಗೆ ಹೇಳುವುದಾದರೆ ಈ Whatsapp ಗ್ರೂಪಿನ ಆಡ್ಮಿನ್ ಶಿವು ಪುತ್ತೂರು ಈಗಲೂ ಒಂದು ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸದಸ್ಯರಲ್ಲಿ ಒಬ್ಬರು ಟ್ಯಾಕ್ಸಿ ಡ್ರೈವರ್ ಆಗಿದ್ದರೆ ಮತ್ತೊಬ್ಬ ಹೋಟೆಲ್ ಕಾರ್ಮಿಕ, ಮಗದೊಬ್ಬಳು ಖಾಸಗಿ ಕಛೇರಿಯಲ್ಲಿ ಕ್ಲರ್ಕ್ ಆಗಿದ್ದರೆ ಇನ್ನೊಬ್ಬರು ಬಾರಿನಲ್ಲಿ ವೈಟರ್ ಹೀಗೆ ಪ್ರತಿಯೊಬ್ಬ ಸದಸ್ಯನು ಆರ್ಥಿಕವಾಗಿ ಕೆಳವರ್ಗ ಯಾ ಮಧ್ಯಮ ವರ್ಗದ ಮನೆಗಳಿಂದ ಬಂದವರು.
ಆದರೆ ಇವರಲ್ಲಿ ಹೃದಯ ಶ್ರೀಮಂತಿಕೆಗೆ ಕೊರತೆ ಇಲ್ಲ. ಯಾವುದೇ ಪ್ರಚಾರದ ಹಂಗೂ ಇಲ್ಲದೆ ಸದಾ ಸಮಾಜದ ಕಷ್ಟಗಳಿಗೆ ತನ್ನ ಕೈಲಾದ ರೀತಿಯಲ್ಲಿ ಸ್ಪಂದಿಸುವ ತುಡಿತ ಇರುವ ಯುವ ಮನಸ್ಸುಗಳಿವು. ಈ ಗ್ರೂಪಿನ ಆರ್ಥಿಕ ಸಹಾಯ ಯೋಜನೆಗಳಿಗೆ 200ರೂ ಗಳಿಂದ 20000ಗಳ ವೆರೆಗೆ ನೀಡಿದವರಿದ್ದಾರೆ ಆದರೆ ಯಾರೊಬ್ಬರಿಗೂ ಸಮ್ಮಾನಿಸಿದ ಹಾರ ತುರಾಯಿ ನೀಡಿದ ಉದಾಹರಣೆಗಳಿಲ್ಲ!!!! ಇಲ್ಲಿ ಮೊತ್ತ ನಗಣ್ಯ ಭಾವನೆಗಳಿಗೆ ಪ್ರಾಮುಖ್ಯತೆ. ಎಲ್ಲಾ ಸದಸ್ಯರಿಗೂ ಸಮಾನ ಪ್ರಾಶಸ್ತ್ಯ!!!
ಈ Whatsapp ಗ್ರೂಪ್ ಈ ವರೆಗೂ ತಿಂಗಳಿಗೊಂದರಂತೆ 9 ಆರ್ಥಿಕ ಸೇವಾ ಯೋಜನೆಯನ್ನು ಪೂರ್ಣಗೊಳಿಸಿದ್ದು
1ನೇಯ ಹೆಜ್ಜೆ – 18,000.ರೂ.ಗಳು
2ನೇಯ ಹೆಜ್ಜೆ – 26,000.ರೂ.ಗಳು
3ನೇಯ ಹೆಜ್ಜೆ – 45,000.ರೂ.ಗಳು
4ನೇಯ ಹೆಜ್ಜೆ – 73,900.ರೂ.ಗಳು
5ನೇಯ ಹೆಜ್ಜೆ – 1ಲಕ್ಷ ರೂ.ಗಳು
6ನೇಯ ಹೆಜ್ಜೆ – 25,000.ರೂ.ಗಳು
7ನೇಯ ಹೆಜ್ಜೆ – 70,000.ರೂ.ಗಳು
8ನೇಯ ಹೆಜ್ಜೆ – 1ಲಕ್ಷ.ರೂ.ಗಳು
9ನೇಯ ಹೆಜ್ಜೆ – 25,250.ರೂ.ಗಳ ಮೂಲಕ ನೊಂದವರ ಕಣ್ಣೀರು ಒರಸಿಸುವ ಪ್ರಯತ್ನ ಮಾಡಿದೆ.
ಪ್ರತಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೊದಲು ಆ ವ್ಯಕ್ತಿಯ ಮನೆಗೆ ಸದಸ್ಯರು ಭೇಟಿಯಾಗಿ ಅಲ್ಲಿನ ನೈಜ ಸ್ಥಿತಿಯನ್ನು ಅಧ್ಯಯನ ಮಾಡಿ ಆ ವ್ಯಕ್ತಿಗೆ ನಿಜವಾಗಲೂ ಆರ್ಥಿಕ ಸಹಾಯದ ಅವಶ್ಯಕತೆ ಇದೆ.ಬೇರಾವ ಮೂಲದಿಂದಲೂ ಆತನಿಗೆ ಸಹಾಯ ಸಿಗುತ್ತಿಲ್ಲವೆಂದು ಮನಗಂಡ ನಂತರವೇ ಯೋಜನೆಯನ್ನು ಗ್ರೂಪಿನಲ್ಲಿ ಪ್ರಕಟಿಸುತ್ತದೆ. ಹಾಗಾಗಿ ನಾವು ನೀಡಿದ ನಮ್ಮ ಶ್ರಮದ ದುಡಿಮೆ ಅವಶ್ಯಕತೆ ಇಲ್ಲದವರ ಪಾಲಾಗುತ್ತದೆ ಎಂದು ಯೋಚನೆ ಮಾಡುವ ಅಗತ್ಯವಿಲ್ಲ. ಯೋಜನೆಯ ವಿವರ ಲೆಕ್ಕಾಚಾರ ಪ್ರತಿಯೊಂದು ಕೇವಲ Whatsapp ಗ್ರೂಪಿನಲ್ಲಿ ಮಾತ್ರ ಹರಡಿಸುತ್ತಾರೆ ಈ ವರೆಗೆ ಒಂದೇ ಒಂದು ಮನವಿ ಪತ್ರವನ್ನು ಮುದ್ರಿಸದೆ 5ಲಕ್ಷಕೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿರುವುದು ವಿಶೇಷ.
ಆರ್ಥಿಕ ಸೇವಾಯೋಜನೆಗಳಲ್ಲದೆ “ಹಿಂದೂ ವಾರಿಯರ್ಸ್ ಬ್ಲಡ್ ” ಎಂಬ ಗ್ರೂಪ್ ಆರಂಭಿಸಿದ್ದೂ ಜಿಲ್ಲೆಯಲ್ಲಿ ಯಾರಿಗೂ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದದಾಗ “ಹಿಂದೂ ವಾರಿಯರ್ಸ್ ಬ್ಲಡ್ “ನ ಸದಸ್ಯರು ರಕ್ತದಾನಕ್ಕೆ ಸಿದ್ಧರಾಗಿರುತ್ತಾರೆ. ಕೆಲವು ವಾರಗಳ ಹಿಂದೆ ವ್ಯಕ್ತಿಯೊಬ್ಬರಿಗೆ 200ಯುನಿಟುಗಳಷ್ಟು ರಕ್ತದ ಅವಶ್ಯಕತೆ ಇದ್ದಾಗ ಒಂದೇ ದಿನದಲ್ಲಿ 80ಯುನಿಟುಗಳಷ್ಟು ರಕ್ತದ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಈ Whatsapp ಗ್ರೂಪಿನದ್ದು ಇದಲ್ಲದೆ ಅನಾಥಾಶ್ರಮಗಳಲ್ಲಿ ರಕ್ಷಾಂಧನ, ದೀಪಾವಳಿಗಳಂತಹ ಹಬ್ಬಗಳನ್ನು ಆಚರಿಸಿ ಮಕ್ಕಳಿಗೆ ಕಲಿಕಾ ಸಮಾಗ್ರಿಗಳ ವಿತರಣೆ, ದೇವಸ್ಥಾನಗಳ ಜೀರ್ಣೋದ್ಧಾರಗಳಲ್ಲಿ ಶ್ರಮದಾನ, ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಳುವುದು ಹೀಗೆ ರಚನಾತ್ಮ ಕಾರ್ಯಕ್ರಮಗಳಲ್ಲಿ “ಹಿಂದೂ ವಾರಿಯರ್ಸ್ ” Whatsapp ಗ್ರೂಪ್ ತೊಡಗಿಸಿಕೊಂಡಿದೆ.
ಸಾಮಾಜಿಕ ಜಾಲತಾಣಗಳು ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಮಾತಿನ ನಡುವೆಯೂ ಸಾಮಾಜಿಕ ಜಾಲತಾಣಗಳನ್ನು ಸಮಾಜದಲ್ಲಿ ಬದಲಾವಣೆ ತರುವುದಕ್ಕೂ ಬಳಸಬಹುದೆಂಬುದಕ್ಕೆ “ಹಿಂದೂ ವಾರಿಯರ್ಸ್” Whatsapp ಗ್ರೂಪೇ ಸಾಕ್ಷಿ. ಇವರಿಂದ ಪ್ರೇರಣೆ ಪಡೆದು ಈಗಾಗಲೇ 4-5 Whatsapp ಗ್ರೂಪುಗಳು ಈ ರೀತಿಯ ಸೇವಾ ಕಾರ್ಯವನ್ನು ಆರಂಭಿಸಿವೆ. ಅಶಕ್ತರ ಕಷ್ಟಗಳಿಗೆ ಸಣ್ಣ ತುಡಿತ ಹೃದಯದಲ್ಲಿದ್ದರೆ ಬಡತನ ಅಡ್ಡಿಯಾಗಲಾರದು ಎಂದೂ ಹಿಂದೂ ವಾರಿಯರ್ಸ್” Whatsapp ಗ್ರೂಪಿನ ಸದಸ್ಯರು ತೋರಿಸಿ ಕೊಟ್ಟಿದ್ದಾರೆ.
ಸ್ವಾಮಿ ವಿವೇಕನಂದರ ಮಾತಿನಂತೆ ಸಣ್ಣ ಸಣ್ಣ ವ್ಯಕ್ತಿಗಳಿಂದಲೇ ರಾಷ್ಟ ನಿರ್ಮಾಣದ ಕಾರ್ಯ ಸಾಧ್ಯ ಎಂಬುದಕ್ಕೆ “ಹಿಂದೂ ವಾರಿಯರ್ಸ್”ನ ಸದಸ್ಯರೇ ಉದಾಹರಣೆ. “ಹಿಂದೂ ವಾರಿಯರ್ಸ್” ತನ್ನ ಕಾರ್ಯವನ್ನು ಇನ್ನೂ ವಿಸ್ತಾರಿಸಬೇಕೆಂಬ ಹಂಬಲದಲ್ಲಿದೆ ನೊಂದ ಬಡಜನರಿಗೆ ನೆರಳಾಗಿ, ಕಣ್ಣೀರೊರೆಸುವ ಕೈಯಾಗಿ, ಅಶಕ್ತ ಜನರ ಉದ್ದಾರಕ್ಕಾಗಿ, ಸ್ವಸ್ಥ ಸಮಾಜದ ಪರಿಕಲ್ಪನೆಗಾಗಿ ಪ್ರಚಾರದ ಹಂಬಲವಿಲ್ಲ ಕೈ ಜೋಡಿಸಬೇಕೆಂಬ ನಿಸ್ವಾರ್ಥ ತುಡಿತ ನಿಮ್ಮಲಿದ್ದರೆ ನೀವು ಈ ಸೇವಾ ಯಜ್ಞದಲ್ಲಿ ಸೇರಿಕೊಳ್ಳಬಹುದು ಸಂಪರ್ಕಕ್ಕಾಗಿ +91 99 72 737528 ಶಿವು ಪುತ್ತೂರು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.