ಉಡುಪಿ: ರಥಸಪ್ತಮಿ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠ ಮತ್ತು ಸ್ವಾಮಿ ವಿವೇಕಾನಂದ ಯೋಗ ಸ್ವಾಸ್ಥ್ಯ ಕೇಂದ್ರ ಮತ್ತು ಆರೋಗ್ಯ ಭಾರತಿ ಆಶ್ರಯದಲ್ಲಿ ರವಿವಾರ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಸುಮಾರು 200 ಯೋಗಪಟುಗಳು 108 ಸೂರ್ಯ ನಮಸ್ಕಾರಗಳನ್ನು ಮಾಡಿದರು. ಇದರ ಜತೆಗೆ ಸೂರ್ಯಾಷ್ಟೋತ್ತರ ಶತನಾಮಾವಳಿ ಪಠಿಸಲಾಯಿತು.
ಯೋಗಪಟು ಡಾ| ಗಣಪತಿ ಜೋಯಿಸ್ ಅವರು ಸೂರ್ಯ ನಮಸ್ಕಾರದಿಂದ ಆರೋಗ್ಯದ ಮೇಲಾಗುವ ಲಾಭ, ವೇದ ಮೊದಲಾದ ಶಾಸ್ತ್ರ ಗ್ರಂಥಗಳಲ್ಲಿ ಸೂರ್ಯ ನಮಸ್ಕಾರದ ಉಲ್ಲೇಖದ ಕುರಿತು ಮಾತನಾಡಿದರು.ಪರ್ಯಾಯ ಪೀಠಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸೂರ್ಯ ನಮಸ್ಕಾರ ಪರಂಪರಾ ಗತವಾಗಿ ಶಾಸ್ತ್ರಗಳಲ್ಲಿ ಇದ್ದರೂ ಈಗಿನ ಕಾಲಕ್ಕೆ ತಕ್ಕುದಾಗಿ ವೈಜ್ಞಾನಿಕ ವಿಮರ್ಶೆಯೊಂದಿಗೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ವೈದ್ಯ ಡಾ| ದಿನೇಶ ನಾಯಕ್, ಬಿ.ಸಿ. ಪೈ, ವೇಣುಗೋಪಾಲ್, ಪ. ವಸಂತ ಭಟ್ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಮಲ್ಪೆಯ ಸದಾನಂದ ಸಾಲ್ಯಾನ್ ಉಪಸ್ಥಿತರಿದ್ದರು.
ರಾಘವೇಂದ್ರ ಆಚಾರ್ಯರ ಪ್ರಾಯೋಜಕತ್ವದಲ್ಲಿ ಆದಿತ್ಯ ಹೃದಯ ಹೋಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.