ಬೆಳ್ತಂಗಡಿ : ಕೇಂದ್ರ ಬಿ.ಜೆ.ಪಿ. ಸರಕಾರದ ರೂವಾರಿ ಪ್ರಧಾನಿ ಮೋದಿ ಹೆಸರಿಗೆ ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಾಸಾತಿಯಾದ ಬಗ್ಗೆ ರೂ.15 ಲಕ್ಷ ರೂಗಳ ಚೆಕ್ ನ್ನು ಸಾರ್ವಜನಿಕವಾಗಿ ಜನ ಸಾಮಾನ್ಯರಿಗೆ ಬೆಳ್ತಂಗಡಿ ನಗರ ಪ್ರದೇಶದಲ್ಲಿ ಹಂಚುವ ಕಾರ್ಯ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜರವರ ಮಾರ್ಗದರ್ಶನ ನೇತೃತ್ವದೊಂದಿಗೆ ಜಿಲ್ಲಾ ಹಾಗೂ ತಾಲೂಕು ಯುವ ಕಾಂಗ್ರೇಸ್ ಕಾರ್ಯಕರ್ತರಿಂದ ಈಚೆಗೆ ನಡೆಯಿತು.
ವಿತರಣೆ ಮಾಡಿದ ಚೆಕ್ಗಳು ಅಂದು ಬಿ.ಜೆ.ಪಿ ಪ್ರಚಾರ ಸಮಿತಿಅಧ್ಯಕ್ಷ ಇಂದಿನ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆ ನಾನು ನಿರ್ದರಿಸಿದ್ದೇನೆ. ನೀವು ನನಗೆ ಆಶೀರ್ವದಿಸಿ ಅವಕಾಶ ಕೊಟ್ಟರೆಕಪ್ಪು ಹಣವನ್ನು ಭಾರತಕ್ಕೆ 100 ದಿನಗಳೊಳಗೆ ವಾಪಸ್ಸುತರುತ್ತೇನೆ. ಹಾಗದಲ್ಲಿ ಪ್ರತಿ ಭಾರತೀಯನೂ 15 ಲಕ್ಷ ರೂಗಳು ಸಿಗಲಿದೆ .
ಈ ಭರವಸೆಯನ್ನು ಕೇಳಿ ಜನ ನಂಬಿಕೆ ಇಟ್ಟುಇನ್ನು ಮುಂದೆ ನಮ್ಮಕಷ್ಟದ ಬಡತನದ ದಿನಗಳು ಹೋಗಲಿವೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದು ನಮಗೆ ಅತೀ ಶೀಘ್ರದಲ್ಲೇ ರೂ 15 ಲಕ್ಷಗಳು ಸಿಗಲಿವೆ ಎಂದು ಆತ್ಮವಿಶ್ವಾಸದಿಂದ ನರೇಂದ್ರ ಮೋದಿಯವರಿಗೆ ಜಿಲ್ಲಾ ಸಂಸದ ನಳಿನ್ ಕುಮಾರ್ಕಟೀಲ್ ರವರ ಮೂಲಕ ಮತವನ್ನು ಕಳುಹಿಸಿಕೊಟ್ಟರು.
ಆದರೆ ಈ ಭರವಸೆ ಕೇವಲ ಚುನಾವಣೆ ಪ್ರಚಾರಎಂದು ಬಿ.ಜೆ.ಪಿ ರಾಷ್ಟ್ರೀಯಅಧ್ಯಕ್ಷಅಮಿತ್ ಷಾ ಹೇಳುವ ಮೂಲಕ ಬಿ.ಜೆ.ಪಿ ತನ್ನ ಮೋಸದ ಮುಖವಾಡ ತೋರಿಸಿದೆ. ಸರಕಾರ ಬಂದು 150 ದಿನ ಕಳೆದು ಹೋಯಿತುಕಪ್ಪು ಹಣದ ಪತ್ತೆಇಲ್ಲ. ಅಟೋಚಾಲಕರಿಗೆದುಃಸ್ವಪ್ನವಾಗುವಕೇಂದ್ರರಸ್ತೆ ಸಾರಿಗೆ ಸುದಾರಣಾ ಸುಗ್ರೀವಾಜ್ಞೆ ಮೂಲಕ ಅವರ ಹೊಟ್ಟೆಗೆ ಹೊಡೆಯುವ ಕಾನುನು ಕೃಷಿಕರಿಗೆ ಮಾರಕವಾಗುವ ಭೂ ಸ್ವಾದೀನ ಸುಗ್ರೀವಾಜ್ಞೆ ಜಾರಿಗೊಳಿಸುವ ಯತ್ನದಲ್ಲೆಕೇಂದ್ರ ಸರ್ಕಾರತಮ್ಮಋಣ ತೀರಿಸಿದ ಉದ್ಯಮಿಗಳ ಹಿತಕಾಯುತ್ತಿದೆಎಂದು ವಿಧಾನ ಪರಿಷತ್ ಸದಸ್ಯರಾದಐವನ್ ಡಿ’ಸೋಜ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವಕಾಂಗ್ರೇಸ್ ಅಧ್ಯಕ್ಷ ನಿತಿನ್ರೈಅಟೋಚಾಲಕರಿಗೆಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಮೋಹನ್ಗೌಡ ಕಲ್ಮಂಜ ತಾಲೂಕಿನ ಹಿರಿಯ ನಾಯಕರಾದ ಈಶ್ವರ ಭಟ್ರವರೊಂದಿಗೆ ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷ ರಾಮಚಂದ್ರಗೌಡ ಜಿಲ್ಲಾ ಪಂಚಾಯತ್ ಸದಸ್ಯ ಶೈಲೇಶ್ಕುಮಾರ್, ಹರೀಶ್ ಬಂದಾರು, ಕಾರ್ಯಧ್ಯಕ್ಷ ಅಭಿನಂದನ್, ಕಾಲಿದ್ ಲಾಲ, ಕಲಂದರ್ಷಾ, ಸಾಹುಲ್ ಹಮೀದ್, ಅಜಯ್ರವರೊಂದಿಗೆತಾಲೂಕಿನ ಸುಮಾರು ೨೦೦ಕ್ಕೂ ಹೆಚ್ಚು ಯುವಕಾಂಗ್ರೇಸ್ಕಾರ್ಯಕರ್ತರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.