Saturday, February 13th, 2016
Admin
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಂಬಯಿಯ ಬಾಂದ್ರ ಕುಲಾ ಕಾಂಪ್ಲೆಕ್ಸ್ನ ಎಂಎಂಆರ್ಡಿಎ ಮೈದಾನದಲ್ಲಿ ‘ ಮೇಕ್ ಇನ್ ಇಂಡಿಯಾ’ ವೀಕ್ಗೆ ಚಾಲನೆ ನೀಡಿದರು.
ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಮೇಕ್ ಇನ್ ಇಂಡಿಯಾ ವೀಕ್ನ್ನು ಹಮ್ಮಿಕೊಂಡಿವೆ.
ಉತ್ಪಾದನ ವಲಯದಲ್ಲಿ ಭಾರತದ ಸಾಧನೆ ಮತ್ತು ಬಂಡವಾಳ, ಸಂಶೋಧನೆ, ಉತ್ಪಾತದನ ಹಬ್ ಆಗಿ ಪ್ರಸ್ತುತ ಭಾರತದ ಸ್ಥಿತಿಯನ್ನು ಅನಾವರಣಗೊಳಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
68ಕ್ಕೂ ಹೆಚ್ಚು ದೇಶಗಳು, 17 ಭಾರತದ ರಾಜ್ಯಗಳು ಮೇಕ್ ಇನ್ ಇಂಡಿಯಾ ವೀಕ್ನಲ್ಲಿ ಪಾಲ್ಗೊಳ್ಳುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ದೇಶ ವಿದೇಶಗಳ ನೂರಾರು ಉದ್ಯಮಿಗಳು ಭಾಗವಹಿಸಿದ್ದರು.