ನವದೆಹಲಿ: ವಿದೇಶಿ ಕರೆನ್ಸಿಗಳನ್ನು ಭಾರತಕ್ಕೆ ನಿರಂತರವಾಗಿ ತರುತ್ತಿರುವವರು ಇನ್ನು ಮುಂದೆ ಸೆಂಟ್ರಲ್ ರಿವೆನ್ಯೂ ಇಂಟೆಲಿಜೆನ್ಸ್ ಏಜೆನ್ಸಿಯ ಪರಿಶೀಲನೆಗೆ ಒಳಪಡಲಿದ್ದಾರೆ.
ಭಾರತಕ್ಕೆ ಕಪ್ಪು ಹಣ ಹರಿದು ಬರುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸುಮಾರು 32,000 ಕರೆನ್ಸಿ ಡಿಕ್ಲರೇಶನ್ ಫಾಮ್ಗಳನ್ನು ಭರ್ತಿ ಮಾಡಿ ಭಾರತಕ್ಕೆ ಆಗಮಿಸುವ ಪ್ರಯಾಣಿಕರನ್ನು ಸೆಂಟ್ರಲ್ ಎಕನಾಮಿಕ್ ಇಂಟೆಲಿಜೆನ್ಸ್ ಬ್ಯುರೋ ತನಿಖೆಗೆ ಒಳಪಡಿಸಿದೆ. ಈ ಬ್ಯುರೋ ಹಣಕಾಸು ಸಚಿವಾಲಯ ಅಧೀನದಲ್ಲಿದೆ.
ದೇಶದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿಂದ ಈ ಡಿಕ್ಲರೇಶನ್ಗಳನ್ನು ಸೆಂಟ್ರಲ್ ಎಕನಾಮಿಕ್ ಇಂಟೆಲಿಜೆನ್ಸ್ ಬ್ಯುರೋ ಪಡೆದುಕೊಳ್ಳಲಿದೆ. ಅಪಾರ ವಿದೇಶಿ ಕರೆನ್ಸಿಗಳೊಂದಿಗೆ ಭಾರತಕ್ಕೆ ಆಗಮಿಸುವ ಪ್ರಯಾಣಿಕರು, ಅವರ ಹೆಸರು, ವಿಳಾಸಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.