ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಷ್ಟಿತ ದೇವಳದಲ್ಲೊಂದಾದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದ ವಾರ್ಷಿಕ ಮಹೋತ್ಸವವಾದ ” ಮಂಗಳೂರು ರಥೊಥ್ಸವ ” ಇದೇ ಬರುವ ಆದಿತ್ಯವಾರ ಫೆ.14ರಂದು ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ.
ಈ ಪ್ರಯುಕ್ತ ರಥೊಥ್ಸವದ ಪ್ರಾರಂಭವು ಬುಧವಾರ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದ್ದು, ಐದು ದಿನಗಳ ಪರ್ಯಂತ ನೆರವೇರಲಿರುವುದು. ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀ ಮಠಾಧೀಶರಾದ ಬಳಿಕ ಪ್ರಪ್ರಥಮ ಬಾರಿಗೆ ರಥೊಥ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು.
ಈ ಪ್ರಯುಕ್ತ ಶ್ರೀಗಳವರು ವಿಶೇಷ ಅಡ್ಡ ಪಲ್ಲಕಿಯಲ್ಲಿ ವಿರಾಜಮಾನಲಾಗಲಿರುವರು. ಸಾಯಂಕಾಲ 6:30ಕ್ಕೆ ರಥಬೀದಿಯ ಸ್ವದೇಶಿ ಸ್ಟೋರ್ ಬಳಿಯಿಂದ ‘ಪುರ ಪ್ರವೇಶ’ ಪ್ರಾರಂಭ ವಾಗಲಿದ್ದು, ವಿವಿಧ ವಾದ್ಯ, ಬಿರುದು-ಬಾವಳಿಗಳೊಂದಿಗೆ ಶ್ರೀಗಳವರನ್ನು ಸ್ವಾಗತಿಸಲಾಗುವುದು. ಊರ , ಪರವೂರ ಸಮಾಜ ಬಾಂಧವರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಶ್ರೀ ದೇವಳದ ಮೊಕ್ತೇಸರರಾದ ಪದ್ಮನಾಭ ಪೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.