ವಿಶಾಖಪಟ್ಟಣಂ: ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ 5 ದಿನಗಳ ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂವ್ (ಐಎಫ್ಆರ್)ನ್ನು ಮೂರು ಸೇನೆಯ ಸುಪ್ರೀಂ ಕಮಾಂಡರ್ ಆದ ರಾಷ್ಟ್ರಪತಿಗಳು ಶನಿವಾರ ಪರಿಶೀಲನೆ ನಡೆಸಿದರು.
ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರೂ ಭಾಗವಹಿಸಿದ್ದರು.
ರಿವ್ಯೂವ್ ಸಂದರ್ಭದಲ್ಲಿ ನೌಕಾಸೇನೆಯು ತನ್ನ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಾಬಲ್ಯವನ್ನು ಪ್ರದರ್ಶಿಸಿದೆ. ಇದರಲ್ಲಿ ನೌಕೆಯ ಒಟ್ಟು 90೦ ಶಿಪ್ಗಳು ಭಾಗವಹಿಸಿವೆ. 50 ದೇಶಗಳು ಕೂಡ ಈ ಮಹಾ ಮಾರಿಟೈಮ್ ಇವೆಂಟ್ನಲ್ಲಿ ಪಾಲ್ಗೊಂಡಿವೆ.
ಗುರುವಾರ ಇದು ಉದ್ಘಾಟನೆಗೊಂಡಿದ್ದು, ಚೀನಾ, ರಷ್ಯಾ, ಯುಎಸ್ಎ, ಜಪಾನ್, ವಿಯೆಟ್ನಾಂ, ಇಸ್ರೇಲ್, ಫ್ರಾನ್ಸ್, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ 50 ದೇಶಗಳು ಭಾಗವಹಿಸಿವೆ.
ಐಎನ್ಎಸ್ ವಿರಾಟ್, ಐಎನ್ಎಸ್ ವಿಕ್ರಮಾದಿತ್ಯ ಈ ಈವೆಂಟ್ನ ಪ್ರಮುಖ ಆಕರ್ಷಣೆಯಾಗಿದೆ. ಭಾರತೀಯ ನೌಕಾ ಸೇನೆ ಇಲ್ಲಿ ತನ್ನ ಫೈಯರ್ ಪವರ್ ಮತ್ತು ಬ್ಲೂ ಸೀ ಸಾಮರ್ಥ್ಯವನ್ನು ಸಾದರಪಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.