ಚೆನ್ನೈ: ವಿವಾಹಿತ ಮಹಿಳೆಯರು ಧರಿಸುವ ಪವಿತ್ರ ಮಂಗಳಸೂತ್ರವನ್ನು ಗುಲಾಮಗಿರಿಯ ಸಂಕೇತವೆಂದು ವಾದಿಸಿರುವ ದ್ರಾವಿಡರ್ ಕಾಳಗಂ ಎಂಬ ತಮಿಳುನಾಡಿನ ಸಂಘಟನೆ ತಾಳಿ ಕೀಳುವ ಹೊಸ ಅಭಿಯಾನವೊಂದಕ್ಕೆ ಮಂಗಳವಾರ ಚಾಲನೆ ನೀಡಿತ್ತು. ತಕ್ಷಣವೇ ಮದ್ರಾಸ್ ಹೈಕೋರ್ಟ್ ಇದಕ್ಕೆ ತಡೆ ನೀಡಿದ ಹಿನ್ನಲೆಯಲ್ಲಿ ಅಭಿಯಾನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆದರೆ ಕೋರ್ಟ್ ತಡೆ ನೀಡುವ ಮೊದಲೇ 21 ಮಹಿಳೆಯರು ತಾಳಿಯನ್ನು ಕಳಚಿದ್ದರು.
ಈ ಅಭಿಯಾನದ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆಯನ್ನು ಹೋಗಿವೆ. ಈ ಅಭಿಯಾನ ಕೋಮು ಸೌಹಾರ್ದತೆಯನ್ನು ಕದಡಬಹುದು ಎಂದು ಆರೋಪಿಸಿ ಸ್ಥಳೀಯ ಪೊಲೀಸರೂ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ.
ಬಳಿಕ ಸರ್ಕಾರದ ಮನವಿಯ ಮೇರೆಗೆ ಮದ್ರಾಸ್ ಹೈಕೋರ್ಟ್ ಅಭಿಯಾನಕ್ಕೆ ತಡೆ ನೀಡಿತು. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ದ್ರಾವಿಡ ಕಾಳಗಂ ತಿಳಿಸಿದೆ.
ಇದೇ ಸಂಘಟನೆ ಗೋಮಾಂಸ ನಿಷೇಧ ವಿರುದ್ಧ ಪ್ರತಿಭಟನೆ ನಡೆಸಲು ಗೋಮಾಂಸ ಭಕ್ಷಣೆ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.