ಬೆಳ್ತಂಗಡಿ : 2016-17ನೇ ಸಾಲಿನಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವ ನಿಟ್ಟಿನಲ್ಲಿ 1500 ಹೊಸ ಮದ್ಯದಂಗಡಿಗಳನ್ನು ತೆರೆಯುವ ಬಗ್ಗೆ ಬಜೆಟ್ನಲ್ಲಿರಾಜ್ಯ ಸರಕಾರ ಘೋಷಣೆ ಸಂಭವವಿದೆ ಹಾಗೂ ರಾಜ್ಯಾಧ್ಯಂತ ಹೊಸ ಲೈಸನ್ಸ್ಗಳನ್ನು ನೀಡುವ ಬಗ್ಗೆ ಸರಕಾರ ಬಜೆಟ್ನಲ್ಲಿ ಘೋಷಿಸಲಿದೆ ಎಂದು ತಿಳಿಸಿದ್ದು, ಸಮಾಜಮುಖಿಯಾಗಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಅಖಿಲ ಕರ್ನಾಟಕಜನಜಾಗೃತಿ ವೇದಿಕೆಗೆಇದುಅತೀವ ನೋವು ತಂದಿದೆ ಎಂದು ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಅಬಕಾರಿ ಸಚಿವರಾದ ಮನೋಹರ್ ತಹಶೀಲ್ದಾರ್ರವರು ಸಚಿವ ಸ್ಥಾನವನ್ನು ಸ್ವೀಕರಿಸಿದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿಯೂ ಈ ಪ್ರಸ್ತಾವವನ್ನು ಮಾಡಿದ್ದರು.ಇದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ಸರಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ ಎನ್ನುವ ಸಂತೊಷದಲ್ಲಿರುವಾಗಲೇ ಇದೀಗ ದಿಢೀರ್ ಈ ವಿಚಾರವಾಗಿ ಸರಕಾರ ಈ ನಿರ್ಧಾರ ತಳೆದಿರುವುದು ವಿಷಾದನೀಯ.
ತಮ್ಮ ಸರಕಾರ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡವರಿಗೆ, ಕೃಷಿಕರಿಗೆ ಆಸರೆಯಾಗಿ ನಿಂತಿದೆ. ಆದರೆ ಅನಧಿಕೃತ ಮದ್ಯಮಾರಾಟದ ನೆಪವೊಡ್ಡಿ ಮದ್ಯ ಮಾರಾಟಗಾರರು, ಮದ್ಯಪಾನಾಸಕ್ತರನ್ನು ಸಮಾಧಾನಪಡಿಸಲು ಮತ್ತು ಕೀಳುಮಟ್ಟದ ರಾಜಸ್ವವನ್ನು ಸಂಗ್ರಹಿಸಲು ಹೊರಟಿರುವ ಸರಕಾರದ ಈ ಕ್ರಮವನ್ನು ರಾಜ್ಯದಜನತೆ ಸಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಈ ಮೂಲಕ ತಿಳಿಸಿದರು.
ವರದಿಗಳ ಪ್ರಕಾರರಾಜ್ಯದಲ್ಲಿ ಈಗಾಗಲೇ 9600 ಮದ್ಯಮಾರಾಟ ಮಾಡಲು ಲೈಸನ್ಸ್ ನೀಡಲಾಗಿದ್ದು, ಈ ಪೈಕಿ 3950 ವೈನ್ಶಾಪ್ಗಳಿವೆ, ಅಲ್ಲದೆ 362 ಎಮ್.ಎಸ್.ಐ.ಎಲ್. ಮದ್ಯದಂಗಡಿಗಳು ಪ್ರತ್ಯೇಕವಾಗಿ ತೆರೆಯಲ್ಪಟ್ಟಿವೆ. ಸಾಕಷ್ಟು ಜನರು ಪ್ರಸ್ತುತಇರುವ ಮದ್ಯದಂಗಡಿಗಳನ್ನೇ ತೆರವುಗೊಳಿಸಬೇಕು, ರಾಜ್ಯದಲ್ಲಿ ಪಾನನಿಷೇಧ ಜಾರಿಯಾಗಬೇಕೆಂದು ಒತ್ತಾಯಿಸುತ್ತಿರಬೇಕಾದರೆ, ಈ ನಿರ್ಧಾರದಿಂದರಾಜ್ಯದಲ್ಲಿಇನ್ನಷ್ಟು ಬಡತನ, ಶೋಷಣೆ, ಅಪಘಾತ, ಅಪರಾಧ, ಕೌಟುಂಬಿಕ ಕಲಹ, ಸಮಾಜದಲ್ಲಿಅಶಾಂತಿತಲೆದೋರುವ ಸಾಧ್ಯತೆಗಳಿವೆ. ಈ ಎಲ್ಲವೂ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಿದಾಗ ಸಂಭವಿಸಲಿದೆ ಎಂದು ಜನಜಾಗೃತಿ ವೇದಿಕೆ ಅಭಿಪ್ರಾಯಪಟ್ಟಿದೆ.
ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆಯಾಗಿದ್ದು, ರಾಜ್ಯದ ೩೦ ಜಿಲ್ಲೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಸುಮಾರು 35 ಲಕ್ಷಕ್ಕೂ ಮಿಕ್ಕಿದ ಫಲಾನುಭವಿಗಳು ಯೋಜನೆಯ ಮೂಲಕ ಸುಸ್ಥಿರ ಬದುಕನ್ನು ನಡೆಸುತ್ತಿದ್ದಾರೆ. ಈ ನಿರ್ಧಾರವನ್ನು ವೇದಿಕೆಯ ಮೂಲಕ ಪಾನಮುಕ್ತರಾದ ಒಂದು ಲಕ್ಷಕ್ಕೂ ಮಿಕ್ಕಿದ ಪಾನಮುಕ್ತರು, ಯೋಜನೆಯ ಫಲಾನುಭವಿಗಳು, ವೇದಿಕೆಯ ಮೂಲಕ ಶ್ರಮಿಸುತ್ತಿರುವ೨೦೦೦೦ಕ್ಕೂ ಮಿಕ್ಕಿದ ಸ್ವಯಂ ಸೇವಕರು, ಅತೀ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳುವಿರೋಧ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ಈ ವಿಚಾರವನ್ನುಕೈಬಿಟ್ಟು ಜನೋಪಯೋಗಿ ಬಜೆಟ್ನ್ನು ಮಂಡನೆ ಮಾಡಿ ಸ್ವಚ್ಚ-ಸ್ವಸ್ಥ ಮತ್ತು ದುಶ್ಚಟಮುಕ್ತ ಕರ್ನಾಟಕವನ್ನು ರಚಿಸಲು ಕಾರ್ಯಕ್ರಮವನ್ನು ರೂಪಿಸುವಂತೆ ವೇದಿಕೆ ಪ್ರಕಟನೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.