ಉಡುಪಿ : ಭವ್ಯ ದರ್ಬಾರ್ ಸಭಾಂಗಣ ಡಾ| ಎಂ. ಮೋಹನ ಆಳ್ವ ಅವರ ಮಾರ್ಗದರ್ಶನದಂತೆ ರೂಪುಗೊಂಡಿದೆ. ಚಿತ್ತಾಕರ್ಷಕ ಗೂಡುದೀಪಗಳು ಸಭಾಂಗಣದ ಅಂದ ಹೆಚ್ಚಿಸಿವೆ. ಸುಮಾರು 10,000 ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇದರಲ್ಲಿರುತ್ತದೆ. ಒಂದು ಬದಿಯಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ.
ಸಾಂಸ್ಕೃತಿಕ ವೈಭವ : ದರ್ಬಾರ್ ಸಭಾಂಗಣದಲ್ಲಿ (ಆನಂದ ತೀರ್ಥ ಮಂಟಪ) ಜ. 14ರಿಂದ 16ರ ವರೆಗೆ ಪ್ರತಿದಿನ ರಾತ್ರಿ 7ರಿಂದ 10 ಗಂಟೆಯ ವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರಗಲಿದೆ. ಜ. 14 ರಂದು ಮೋಹಿನಿಯಾಟ್ಟಂ-ಅಷ್ಟಲಕ್ಷ್ಮೀ, ಬಡಗು ಯಕ್ಷಪ್ರಯೋಗ-ರಾಸಲೀಲೆ, ಮಣಿಪುರದ ಸ್ಟಿಕ್ ಡ್ಯಾನ್, ಆಂಧ್ರ, ಶ್ರೀಲಂಕಾ, ಗುಜರಾತ್, ಮಣಿಪುರ ರಾಜ್ಯಗಳ ನೃತ್ಯ, ಕಥಕ್, ಬಂಗಾಲದ ಪುರುಲಿಯಾ ಮೊದಲಾದವುಗಳು ಸಂಪನ್ನಗೊಳ್ಳಲಿವೆ.
ಗಣ್ಯರ ದಂಡು : ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಉಮಾ ಭಾರತಿ, ಅನಂತ ಕುಮಾರ್, ಸ್ಮತಿ ಇರಾನಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಶ್ರೀಪಾದ ನಾಯಕ್, ಜಿ.ಎಂ. ಸಿದ್ಧೇಶ್ವರ, ಮುಖ್ಯಮಂತ್ರಿಗಳಾದ ರಾಜಸ್ಥಾನದ ವಸುಂಧರಾ ರಾಜೆ, ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ವಿಧಾನಪರಿಷತ್ ಸಭಾಪತಿ ಡಾ| ಎಚ್. ಶಂಕರಮೂರ್ತಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ವೀರಪ್ಪ ಮೊಲಿ, ಜಗದೀಶ್ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ, ಎನ್. ಧರಂಸಿಂಗ್, ರಾಜ್ಯದ ಸಚಿವರಾದ ಡಾ| ಜಿ. ಪರಮೇಶ್ವರ, ಆರ್.ವಿ.ದೇಶಪಾಂಡೆ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ದಿನೇಶ್ ಗುಂಡೂರಾವ್, ಎ. ಮಂಜು, ಮನೋಹರ್ ತಹಶೀಲ್ದಾರ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ವಿಧಾನಸಭೆಯ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ| ಪಿ.ಎಸ್.ದಿನೇಶ್ ಕುಮಾರ್, ನ್ಯಾ| ಕುಮಾರ್, ತಮಿಳುನಾಡಿನ ಸಚಿವ ಪನ್ನೀರ್ ಸೆಲ್ವಂ, ಯೋಜನಾ ಆಯೋಗದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ರಕ್ಷಣಾ ಸಲಹೆಗಾರ ಡಾ| ಪ್ರಹ್ಲಾದ್, ಟಿಟಿಡಿ ಚೇರ್ಮನ್ ಚಡಲವಾಡ ಕೃಷ್ಣಮೂರ್ತಿ ಮೊದಲಾದ ಗಣ್ಯರು ಆಗಮಿಸಲಿದ್ದಾರೆ. ಈ ಪೈಕಿ ಹೆಚ್ಚಿನವರು ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಂಡು ಅನಂತರ ಪರ್ಯಾಯ ದರ್ಬಾರನ್ನು ವೀಕ್ಷಿಸಲಿದ್ದಾರೆ.
ಪೂರ್ಣ ತೊಡಗಿಕೊಂಡ ಅಧಿಕಾರ ವರ್ಗ : ಉಡುಪಿಯ ಮಟ್ಟಿಗೆ ಪರ್ಯಾಯ ಸೇರಿದಂತೆ ಇದುವರೆಗಿನ ಪ್ರಮುಖ ಘಟನಾವಳಿ/ ಕಾರ್ಯಕ್ರಮಗಳಲ್ಲೇ ಪ್ರಪ್ರಥಮ ಬಾರಿಗೆ ಎಂಬಂತೆ ಅಧಿಕಾರಿ ವರ್ಗ ಪರ್ಯಾಯೋತ್ಸವದ ವಿವಿಧ ಕೆಲಸಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಕೊಂಡಿದೆ. ಇಡೀ ಜಿಲ್ಲಾಡಳಿತ ವಿಶೇಷ ಮುತುವರ್ಜಿಯಿಂದ ಕಾರ್ಯಕ್ಷೇತ್ರಕ್ಕೆ ಇಳಿದಿದೆ. ಜಿಲ್ಲಾಧಿಕಾರಿ ಡಾ| ವಿಶಾಲ್, ಎಸ್ಪಿ ಅಣ್ಣಾಮಲೈ, ಪೌರಾಯುಕ್ತ ಮಂಜುನಾಥಯ್ಯ ಒಳಗೊಂಡಂತೆ ಹಿರಿಯ ಅಧಿಕಾರಿಗಳು ದಿನನಿತ್ಯ ರೌಂಡಪ್ನಲ್ಲಿದ್ದು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜ. 13ರಂದು ಡಾ| ವೀರೇಂದ್ರ ಹೆಗ್ಗಡೆಯವರು ದರ್ಬಾರ್ ಸಭಾಂಗಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದಲ್ಲಿ ಸ್ವತ್ಛತಾ ಕೆಲಸಗಳು ಮತ್ತಷ್ಟು ವೇಗ ಪಡೆದುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.