ಭೋಪಾಲ್: ಮಧ್ಯಪ್ರದೇಶ ತನ್ನ ಅನನ್ಯ ಮಹಿಳಾ ಆಧಾರಿತ ಯೋಜನೆಗಳಿಂದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದು, ಇದರ ರಾಜಧಾನಿ ಭೋಪಾಲ್ನ ಮಹಿಳಾ ಸರಪಂಚ್ ಹೊರತಾಗಿ ಇಲ್ಲಿಯ ತಾಯಿ-ಮಗಳ ಜೋಡಿಯೊಂದು ದೇಶದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದೆ.
ಭೋಪಾಲ್ನ ಮಹಿಳಾ ಬರಹಗಾರ್ತಿ ಡಾ. ಸ್ವಾತಿ ತಿವಾರಿ ಹಾಗೂ ವಿಜ್ಞಾನಿಯಾಗಿರುವ ಅವರ ಪುತ್ರಿ ಡಾ.ಪಲ್ಲವಿ ತಮ್ಮ ವಿಶೇಷ ಸಾಧನೆಗಳಿಂದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹೆಸರು ಗಳಿಸಿದ್ದಾರೆ. ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇತ್ತೀಚೆಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಡಾ. ಸ್ವಾತಿ ಅವರು ರಾಜ್ಯದ ಸಾಹಿತ್ಯ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಪುತ್ರಿ ಡಾ. ಪಲ್ಲವಿ ಕ್ಯಾನ್ಸರ್ ನಿರ್ಮೂಲನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕಾಗಿ ಹೊಸ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದಾರೆ.
ಭೋಪಾಲ್ ಅನಿಲ ದುರಂತದಿಂದ ವಿಧವೆಯರು ಎದುರಿಸುತ್ತಿರುವ ಲಿಂಗ ತಾರತಮ್ಯದ ಕುರಿತು ಸ್ವಾತಿ ಬರೆದಿರುವ ’ಸವಾಲ್ ಆಜ್ ಭಿ ಝಿಂದಾ ಹೈ’ ಪುಸ್ತಕವು ಮಾರ್ಚ್ 2015ರಲ್ಲಿ ನ್ಯಾಶನಲ್ ಲಾಡ್ಲಿ ಮೀಡಿಯಾ ಪ್ರಶಸ್ತಿ ಹಾಗೂ ಅಡ್ವರ್ಟೈಸಿಂಗ್ ಪ್ರಶಸ್ತಿ ಪಡೆದಿದೆ. ಭೋಪಾಲ್ ಅನಿಲ ದುರಂತ ಭೋಪಾಲ್ ಮಾತ್ರವಲ್ಲದೇ ಇಡೀ ದೇಶಕ್ಕೆ ಆಗಿರುವ ವಿಪತ್ತು ಎಂದು ಈ ಪುಸ್ತಕದ ಮೂಲಕ ಅವರು ತಿಳಿಸಿದ್ದಾರೆ.
ಈ ದುರಂತದಿಂದ ಮಹಿಳಾ ಸಂತ್ರಸ್ತರು ಇಂದಿಗೂ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಮಹಿಳೆಯರಿಗೆ ರೇಶನ್ ಕಾರ್ಡ್ಗಿಂತಲೂ ವೈದ್ಯಕೀಯ ಕಾರ್ಡ್ನ ಹೆಚ್ಚು ಗತ್ಯವಿದೆ ಎಂದು ಸ್ವಾತಿ ತಮ್ಮ ಪುಸ್ತದ ಮೂಲಕ ಸಾರಿದ್ದಾರೆ.
ಇನ್ನೊಂದೆಡೆ ಡಾ. ಪಲ್ಲವಿ ವೈಯಕ್ತಿಕ ಚಿಕಿತ್ಸೆಯಿಂದ ಮೆದುಳಿನ ಗೆಡ್ಡೆಗಳಿಂದ ಬಳಲುತ್ತಿರುವ ಕ್ಯಾನ್ಸರ್ ರೋಗಿಗಳ ಉಳಿಯುವಿಕೆಯ ಸಾಧ್ಯತೆ ಹೆಚ್ಚಿಸುವಂತಹ ಹೊಸ ಎಂಆರ್ಐ ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ. ಇಂದೋರ್ನ ಎಸ್ಜಿಎಸ್ಐಟಿ ಕಾಲೇಜಿನಿಂದ ಪದವಿ ಪಡೆದಿರುವ ಪಲ್ಲವಿ ಅಮೇರಿಕಾದಲ್ಲಿ ಬಯೋ ಮೆಡಿಕಲ್ ಇಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪಡೆದಿದ್ದಾರೆ. ೨೦೧೨ರಿಂದ ಮೆದುಳಿನ ಗೆಡ್ಡೆಗಳ ಚಿಕಿತ್ಸೆ ಮೌಲ್ಯಮಾಪನ, ಆರಂಭಿಕ ರೋಗಲಕ್ಷಣ ಮತ್ತು ತಪಾಸಣೆಯಲ್ಲಿ ಕಾರ್ಯನಿರತರಾಗಿದ್ದಾರೆ.
ವಿಭಿನ್ನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಈ ತಾಯಿ ಮಗಳು ಈಗ ಭಾರತದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.