ನ್ಯೂಯಾರ್ಕ್: ಟ್ವಿಟರ್ ಹೊಸ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ಪೋಸ್ಟ್ ಮಾಡುವ ಟ್ವೀಟ್ಗಳ ಪದಗಳ ಮಿತಿಯನ್ನು ಹೆಚ್ಚಿಸಲಿದೆ ಎಂದು ಟೆಕ್ನಾಲಜಿ ಸುದ್ದಿ ವೆಬ್ಸೈಟ್ Re/code ವರದಿ ಮಾಡಿದೆ.
ಪ್ರಸ್ತುತ ಟ್ವಿಟರ್ ಪದಗಳ ಮಿತಿ 140 ಇದ್ದು, ಇದನ್ನು 10,000ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು Re/code ತಿಳಿಸಿದೆ.
ಟ್ವಿಟರ್ ತನ್ನ ಪ್ರಸ್ತುತ ಇರುವ ನೈಜ ಸ್ಥಿತಿಯನ್ನು ಉಳಿಸಿಕೊಳ್ಳಲಿದೆ. ಬಳಕೆದಾರರು ಟ್ವೀಟ್ ಮೇಲೆ ಕ್ಲಿಕ್ ಮಾಡಿದಲ್ಲಿ ವಿಸ್ತರಿಸಲ್ಪಡುತ್ತದೆ. ಜನರನ್ನು ಹೆಚ್ಚು ಆಕರ್ಷಿಸಲು ಟ್ವಿಟರ್ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸಿಯವರು ತಮ್ಮ ಹೊಸ ಆವೃತ್ತಿಯ ಮೇಲೆ ಪ್ರಯೋಗ ನಡೆಸಲಿದ್ದಾರೆ.
ಟ್ವಿಟರ್ ಕೆಲವು ತಿಂಗಳ ಹಿಂದೆ ’ಮೊಮೆಂಟ್ಸ್’ ಸೌಲಭ್ಯವನ್ನು ಪರಿಚಯಿಸಿದ್ದು, ಚುನಾವಣಾ ಟ್ವೀಟ್ಗಳನ್ನು ಒದಗಿಸಿತ್ತು. ಜೊತೆಗೆ ’ಖರೀದಿ (buy) ಬಟನ್ನ್ನು ಅಳವಡಿಸಿದೆ. ನಕ್ಷತ್ರಾಕಾರದ ’ಫೇವರಿಟ್’ ಐಕಾನ್ನ್ನು ಹೃದಯಾಕಾರದ ’ಲೈಕ್’ ಐಕಾನ್ ಆಗಿ ಪರಿವರ್ತಿಸಿದೆ.
ಫೇಸ್ಬುಕ್ನ ಫೋಟೋ ಹಂಚಿಕೆ ಆ್ಯಪ್ ಇನ್ಸ್ಟಾಗ್ರಾಮ್ ಜೊತೆ ಟ್ವಿಟರ್ ವಿಲೀನಗೊಂಡಿದ್ದು, ಅದರ ಬಳಕೆದಾರರ ಸಂಖ್ಯೆ 300-400 ಮಿಲಿಯನ್ಗೆ ಹೆಚ್ಚಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.