ಇಸ್ಲಾಮಾಬಾದ್: ಅತ್ಯಂತ ಅಮಾನುಷ ಉಗ್ರ ಸಂಘಟನೆ ತಾಲಿಬಾನ್ ತನ್ನ ಮೊದಲ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತಾನು 2015ರಲ್ಲಿ 686 ಹತ್ಯೆಗಳನ್ನು ನಡೆಸಿರುವುದಾಗಿ ಘೋಷಿಸಿದೆ.
ಡಿ.29ರಂದು ವರದಿಯನ್ನು ಉರ್ದುವಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಭದ್ರತಾಪಡೆಗಳ, ಪೊಲೀಸ್, ರಾಜಕಾರಣಿಗಳ, ನಾಗರಿಕರ ಮೇಲೆ ನಡೆಸಿದ ದಾಳಿಯ ಸಂಪೂರ್ಣ ವಿವರಗಳನ್ನು ಅದು ನೀಡಿದೆ.
ವರದಿಯ ಪ್ರಕಾರ 2015ರಲ್ಲಿ ಪಾಕಿಸ್ಥಾನಿ ತೆಹ್ರೀಕ್-ಇ-ತಾಲಿಬಾನ್ ಒಟ್ಟು 73 ಟಾರ್ಗೆಟ್ ಕಿಲ್ಲಿಂಗ್ಸ್ಗಳನ್ನು ನಡೆಸಿದೆ, 12 ಹೊಂಚು ದಾಳಿಗಳನ್ನು ನಡೆಸಿದೆ, 10 ರೈಡ್ಗಳನ್ನು, 19 ಐಇಡಿ ಸ್ಫೋಟಗಳನ್ನು ನಡೆಸಿದೆ. 5 ಆತ್ಮಾಹುತಿ ದಾಳಿ, 17 ಮಿಸೈಲ್ ಅಟ್ಯಾಕ್, ಎರಡು ಹೆಲಿಕಾಫ್ಟರ್ಗಳನ್ನು ಶೂಟ್ ಮಾಡಿದೆ. ಒಟ್ಟು 686 ಮಂದಿಯನ್ನು ಹತ್ಯೆ ಮಾಡಿದೆ.
ಸೆಪ್ಟಂಬರ್ನಲ್ಲಿ ಪೇಶಾವರದ ಬದಬೇರ್ ವಾಯುನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ 247 ಮಂದಿಯನ್ನು ಕೊಂದಿದ್ದೇವೆ ಎಂದು ವರದಿಯಲ್ಲಿ ತಾಲಿಬಾನ್ ತಿಳಿಸಿದೆ. ಆದರೆ ಅಧಿಕೃತ ಸರ್ಕಾರಿ ವರದಿಯಲ್ಲಿ 24 ಮಂದಿ ಸತ್ತಿರುವುದಾಗಿ ಇದೆ.
ತಾಲಿಬಾನ್ ವರದಿ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿದೆ. ಆದರೆ ಇದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಗಳಿಲ್ಲ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.