ಕಾಂಝೀಕಾಡ್: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ವೇಳೆ ಹುತಾತ್ಮರಾದ ಈ ದೇಶದ ವೀರ ಯೋಧರನ್ನು ನೆನೆದು ಸಮಸ್ತ ಭಾರತೀಯರು ದುಃಖ ತಪ್ತರಾಗಿದ್ದಾರೆ. ಆದರೆ ದೇಶದ್ರೋಹಿ ಕೇರಳಿಗನೊಬ್ಬ ಬಲಿದಾನಗೈದ ಹುತಾತ್ಮನಿಗೆಯೇ ಅವಮಾನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಅನ್ವರ್ ಸಿದ್ದಿಕ್ ಎಂಬ 24 ವರ್ಷದ ಕೇರಳಿಗನೊಬ್ಬ ತಾನು ಮಾಧ್ಯಮಂ ಪತ್ರಿಕೆಯ ಪತ್ರಕರ್ತನೆಂದು ಹೇಳಿಕೊಂಡು, ಫೇಸ್ಬುಕ್ನಲ್ಲಿ ಫೇಕ್ ಪ್ರೊಫೈಲ್ ಸೃಷ್ಟಿಸಿ ಪಠಾನ್ಕೋಟ್ ದಾಳಿಯಲ್ಲಿ ಹುತಾತ್ಮರಾದ ಕರ್ನಲ್ ನಿರಂಜನ್ ಅವರನ್ನು ಅವಮಾನಿಸಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.
ಇದರ ಮಾಹಿತ ಪಡೆದ ಪೊಲೀಸರು ಈತನ ಜನ್ಮ ಜಾಲಾಡಲು ಮುಂದಾದಾಗ ಈತ ಮಾಧ್ಯಮಂ ಪತ್ರಿಕೆಯ ಪತ್ರಕರ್ತನಲ್ಲ ಎಂಬುದು ತಿಳಿದು ಬಂದಿದೆ. ಸ್ವತಃ ಪತ್ರಿಕೆಯವರೂ ಈತನ ವಿರುದ್ಧ ದೂರು ಸಲ್ಲಿಸಿದ್ದರು.
ಇದೀಗ ಅನ್ವರ್ನನ್ನು ಐಪಿಸಿ ಸೆಕ್ಷನ್ 124(ಎ) ಅನ್ವಯ ಬಂಧಿಸಲಾಗಿದೆ. ಭಾರತ ವಿರೋಧಿ ಹೇಳಿಕೆ ನೀಡಿದ ಪ್ರಕರಣ ಜಡಿಯಲಾಗಿದೆ.
ಈ ರೀತಿ ಕಾಮೆಂಟ್ಗಳನ್ನು ಹಾಕುವುದು ಅಪರಾಧ ಎಂದು ತನಗೆ ಗೊತ್ತೇ ಇರಲಿಲ್ಲ ಎಂದು ಈ ಯುವಕ ಹೇಳಿಕೊಂಡಿದ್ದಾನಂತೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.