ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರವಾಸೋದ್ಯಮ ಅಸೋಸಿಯೇಶನ್ ಸಹಕಾರದೊಂದಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಜಾಗೃತಿ ಮೂಡಿಸುವ ಗುರಿಯೊಂದಿಗೆ ಭಾರತದ ಸ್ವಯಂಸೇವಾ ಆರೋಗ್ಯ ಅಸೋಸಿಯೇಶನ್ (ವಿಎಚ್ಎಐ) 10 ದಿನಗಳ ಪ್ರಚಾರಾರ್ಥವಾಗಿ ಪ್ರವಾಸ ಆರಂಭಿಸಿದೆ.
ಡಿ.31ರಿಂದ ಜ.9ರ ವರೆಗೆ 10 ದಿನಗಳ ಕಾಲ ನಡೆಯುವ ಈ ಪ್ರವಾಸದಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯಕರ್ತರು ಹಾಗೂ ಪ್ರವಾಸೋದ್ಯಮ ಪೊಲೀಸ್ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವಿಎಚ್ಎಐ ವಕ್ತಾರ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ದಾಲ್ ನದಿ, ನೈಜೀನ್, ಚಿನಾರ್ಬಾಗ್, ಚೌಟ್ ಕುಲ್, ಝೇಲಮ್ ನದಿಗಳ ಸುಮಾರು 960 ದೋಣಿಗಳನ್ನು ಹೊಂದಿದ ಕಾಶ್ಮೀರ ದೋಣಿ ಮಾಲಕರ ಸಂಘದ ವಿವಿಧ ದೋಣಿ ಮಾಲಕರು ಈ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ದಾಲ್ ನದಿ ಸುತ್ತಲಿನ ಕಾಶ್ಮೀರ ಶಿಕಾರಾ ಮತ್ತು ಟ್ಯಾಕ್ಸಿ ಮಾಲಕರ ಅಸೋಸಿಯೇಶನ್ ಇದರ 1900 ಶಿಕಾರಾಗಳು ಹಾಗೂ ಕಾಶ್ಮೀರ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಅಸೋಸಿಯೇಶನ್ಗಳು ಕೂಡ ಈ ಪ್ರಚಾರದಲ್ಲಿ ಪಾಲ್ಗೊಂಡಿವೆ.
ಈ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಸಂಘಗಳು ತಮ್ಮ ಸದಸ್ಯರಿಗೆ ‘ನೋ ಸ್ಮೋಕಿಂಗ್’ ಸ್ಟಿಕರ್ಗಳನ್ನು ನೀಡಲಿದ್ದು, ಅವುಗಳನ್ನು ತಮ್ಮ ಆವರಣದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಿದ್ದಾರೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಆಟ್ 2003ರಂದು ಮುದ್ರಿಸಲಾದ ಪ್ರತಿಗಳನ್ನು ಘಟಕ ವ್ಯವಸ್ಥಾಪಕರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.