ಪಾಟ್ನಾ: ಇಲ್ಲಿಯ ಗ್ರಾಮವೊಂದರ 240 ಕುಟುಂಬಗಳಿಗೆ ಎಲ್ಪಿಜಿ ಅನಿಲ ಕನೆಕ್ಷನ್ ನೀಡಲಾಗಿದ್ದು, ಈ ಕುಟುಂಬದ ಮಹಿಳೆಯರು ಅಡುಗೆ ತಯಾರಿಸಲು ಇನ್ನು ಮುಂದೆ ಉರುವಲು ಅಥವಾ ಇದ್ದಿಲು ಬಳಸುವ ಅಗತ್ಯವಿಲ್ಲ.
ಬಿಹಾರದ ಅರ್ವಾಲ್ ಜಿಲ್ಲೆಯ ಪುರಕೋಟಿ ಗ್ರಾಮ ಹೊಗೆರಹಿತ ಗ್ರಾಮವಾಗಿ ಮಾರ್ಪಟ್ಟಿದ್ದು, ಈ ಗ್ರಾಮದ ಸುಮಾರು ೩೦೦ ಮಂದಿ ಮಹಿಳೆಯರು ಲವಲವಿಕೆಯಿಂದ ನಿಟ್ಟುಸಿರು ಬಿಡುವಂತೆ ಮಾಡಿದೆ. ’ಹೊಗೆರಹಿತ ಗ್ರಾಮ ಯೋಜನೆ’ ಅಡಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿ. (ಐಒಸಿಎಲ್) ಕಳೆಎದ ವರ್ಷ ಪುರಕೋಟಿ ಗ್ರಾಮವನ್ನು ದತ್ತುಪಡೆದಿದ್ದು, ಈ ಗ್ರಾಮದ ಎಲ್ಲಾ ಕುಟುಂಬಗಳಿಗೆ ಎಲ್ಪಿಜಿ ಅನಿಲ ಸಿಲಿಂಡರ್, ಸ್ಟೋವ್ ಕಲ್ಪಿಸಿದೆ ಎಂದು ಕಂಪೆನಿಯ ಅಧಿಕಾರಿ ಅರುಣ್ ಪ್ರಸಾದ್ ತಿಳಿಸಿದ್ದಾರೆ.
240 ಮನೆಗಳ ಪೈಕಿ 204 ಮನೆಗಳಿಗೆ ಐಒಸಿಎಲ್ನ ಎಲ್ಪಿಜಿ ಸಂಪರ್ಕ ಹೊಂದಿದ್ದು, 30 ಮನೆಗಳು ಬಿಪಿಸಿಎಲ್ ಹಾಗೂ ಉಳಿದ 6 ಮನೆಗಳಿಗೆ ಎಚ್ಪಿಸಿಎಲ್ ಸಂಪರ್ಕ ಕಲ್ಪಿಸಲಾಗಿದೆ.
ಬಿಹಾರದ 10 ಮಿಲಿಯನ್ ಕುಟುಂಬಗಳು ಇವತ್ತಿಗೂ ಅಡುಗೆಗೆ ಉರುವಲು, ಇದ್ದಿಲು ಬಳಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.