ಕೋಲ್ಕತಾ: ನಗರದ ಹೃದಯ ಭಾಗದಲ್ಲಿರುವ ತಲ್ಪಕುರ್ ಆರಾ ಹೈ ಮದರಸಾದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರಗೀತೆ ಹಾಡಲು ತರಬೇತಿ ನೀಡುತ್ತಿದ್ದ ಮುಖ್ಯೋಪಾಧ್ಯಾಯ ಕಾಜಿ ಮಸುಮ್ ಅಖ್ತರ್ ಅವರನ್ನು ತೀವ್ರವಾದಿ ಮುಸ್ಲಿಂ ಧರ್ಮಗುರುಗಳು ಹಾಗೂ ಸಹಯೋಗಿಗಳು ಅಕ್ತರ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗೂ ಮದರಸಾದಿಂದ ಹೊರಗಟ್ಟಿ ಅವರ ಮದರಸಾ ಪ್ರವೇಶವನ್ನು ನಿಷೇಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಲ್ಪಕುರ್ ಆರಾ ಮದರಸಾ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಾಗಿದ್ದು, ಅಖ್ತರ್ ಮೇಲೆ ದಾಳಿ ನಡೆಸಿರುವವರು ಇಸಿಸ್ ನೆಲೆಯನ್ನು ಗಟ್ಟಿಗೊಳಿಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಅಖ್ತರ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲ ಹಾಗೂ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ಆರು ಬಾರಿ ಮನವಿ ಮಾಡಿದ್ದು, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.
ಮೌಲ್ವಿಗಳು ರಾಷ್ಟ್ರಗೀತೆಯನ್ನು ’ಅಪಚಾರ’ ಮತ್ತು ಹಿಂದುತ್ವದ ಹಾಡು’ ಎಂದು ಹೇಳಿದ್ದು, ಅಖ್ತರ್ ವಿರುದ್ಧ ಫತ್ವಾ ಜಾರಿಗೊಳಿಸಿದ್ದಾರೆ. ಇಸ್ಲಾಮಿಕ್ ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವುದೂ ಕೂಡಾ ಇಸ್ಲಾಂಗೆ ವಿರುದ್ಧವಾಗಿದೆ ಎಂದು ಮೌಲ್ವಿಗಳು ಹೇಳಿದ್ದಾರೆ.
ಕಳೆದ ಮಾರ್ಚ್ನಲ್ಲೂ ಅಖ್ತರ್ ಮೇಲೆ ಕಬ್ಬಿಣದ ರಾಡ್ನಿಂದ ದಾಳಿ ನಡೆಸಲಾಗಿದ್ದು, ತಲೆಗೆ ತೀವ್ರ ಹೊಡೆತ ಬಿದ್ದ ಪರಿಣಾಮ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.