ನವದೆಹಲಿ: ಮಹಿಳೆಯರ ವಿರುದ್ಧ ಘೋರ ಅಪರಾಧಗಳು ನಡೆಯುತ್ತಿದ್ದು, ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಬಗ್ಗೆ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ ದೆಹಲಿ ಕಮಿಷನರ್ ಬಿ.ಎಸ್ ಬಸ್ಸಿ, ಸಂವಿಧಾನ ಅನುಮತಿಸಿದಲ್ಲಿ ಇಂತಹ ಅಪರಾಧಿಗಳನ್ನು ಶೂಟ್ ಇಲ್ಲವೇ ಗಲ್ಲಿಗೇರಿಸುತ್ತಿದ್ದೆ ಎಂದು ಹೇಳಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ನಿವೃತ್ತಿ ಹೊಂದಲಿರುವ ಬಸ್ಸಿ, ದೆಹಲಿಯ ಪೊಲೀಸ್ ಪಡೆ ರಾಜ್ಯ ಸರ್ಕಾರದ ಬದಲು ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ದೆಹಲಿ ನಿವಾಸಿಗಳಿಗೆ ಅದೃಷ್ಟದ ಸಂಗತಿ ಎಂದು ಹೇಳಿದ್ದಾರೆ.
ಅಪರಾಧ ಮತ್ತು ಅಪರಾಧಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಪ್ರಕಾರ, 2014 ಕ್ಕಿಂತ 2015 ರಲ್ಲಿ ಅಪರಾಧಗಳ ಸಂಖ್ಯೆ ಶೇ. 24 ರಷ್ಟು ಹೆಚ್ಚಿವೆ. ಜನರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಎಲ್ಲಾ ಪ್ರಯಯತ್ನಗಳನ್ನು ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದು ಬಸ್ಸಿ ಹೇಳಿದ್ದಾರೆ.
ಸಂಚಾರ ಪೊಲೀಸರ ಮೇಲೆ ದಾಳಿ ನಿದರ್ಶನಗಳು ಹೆಚ್ಚುತ್ತಿದ್ದು, ಸುಮಾರು 1000 ಸಂಚಾರ ಪೊಲೀಸರಿಗೆ ಶೀಘ್ರದಲ್ಲಿ ಬಂದೂಕು ನೀಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಾಹನ ಕಳ್ಳತನ ಪ್ರಕರಣಗಳು ಶೇ.40 ಏರಿಕೆಯಾಗಿದ್ದರೆ, ದರೋಡೆ ಪ್ರಕರಣಗಳು ಶೇ.16.45, ವಸ್ತುಗಳ ಕಸಿಯುವಿಕೆ ಪ್ರಕರಣಗಳು ಶೇ.35.71 ಹೆಚ್ಚಾಗಿವೆ ಎಂದು ಬಸ್ಸಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.