ನವದೆಹಲಿ: ಬಿಆರ್ಎಂ ಲೋಧ ಸಮಿತಿ ಸೋಮವಾರ ತನ್ನ ವರದಿಯನ್ನು ಸಲ್ಲಿಸಿದ್ದು, ಬಿಸಿಸಿಐನಲ್ಲಿ ಸಾಕಷ್ಟು ಬದಲಾವಣೆ ತರಲು ಸೂಚಿಸಿದೆ. ಮುಂಬರುವ 2016ರ ಟಿ20 ಪಂದ್ಯಾವಳಿಗೂ ಮುನ್ನ ಪ್ರಭಾವಶಾಲಿ ಕ್ರಿಕೆಟ್ ಮಂಡಳಿಯಲ್ಲಿ ಸಾಕಷ್ಟು ಸುಧಾರಣೆಗಳಾಗುವ ಸಾಧ್ಯತೆ ಇದೆ.
ಲೋಧ ಸಮಿತಿ ಐಪಿಎಲ್ನ ಮಾಜಿ ಸಿಓಓ ಸುಂದರ್ ರಾಮನ್ ಅವರಿಗೆ ಕ್ಲೀನ್ಚಿಟ್ ನೀಡಿದೆ. ಅವರು ಭ್ರಷ್ಟನಲ್ಲ, ಅವರ ವಿರುದ್ಧ ಆರೋಪ ಸಾಬೀತಾಗಿಲ್ಲ ಎಂದಿದೆ.
ಬಿಸಿಸಿಐ ಆರ್ಟಿಐ ಅಡಿಗೆ ಬರಬೇಕು ಎಂದಿದೆ. ಪ್ರಸ್ತುತ ಬಿಸಿಸಿಐ ಸೊಸೈಟಿಸ್ ಕಾಯ್ದೆಯಡಿ ಬರುತ್ತದೆ. ಸರ್ಕಾರಕ್ಕೆ ಉತ್ತರ ನೀಡಬೇಕಾದ ಅವಶ್ಯಕತೆ ಇಲ್ಲ. ಕ್ರೀಡಾ ಸಚಿವಾಲಯದಿಂದ ಅನುದಾನವನ್ನೂ ಇದು ಪಡೆಯುವುದಿಲ್ಲ.
ಆಟಗಾರರು ಮತ್ತು ಪಂದ್ಯ ಅಧಿಕಾರಿಗಳು ಬೆಟ್ಟಿಂಗ್ನಲ್ಲಿ ಪಾಲ್ಗೊಳ್ಳಬಾರದು ಆದರೆ ತಮ್ಮ ಆಸ್ತಿಯನ್ನು ಅವರು ಬಹಿರಂಗಪಡಿಸಬೇಕು.
ಇನ್ಬಿಲ್ಟ್ ಮೆಕ್ಯಾನಿಸಂ ಮೂಲಕ ಬೆಟ್ಟಿಂಗ್ನ್ನು ಕಾನೂನಾತ್ಮಕಗೊಳಿಸಬೇಕು.
ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿರಬೇಕು, ಪ್ರತಿಭೆಯಿಂದ ಕೂಡಿದ ಸಮಿತಿಯನ್ನು ಬಿಸಿಸಿಐ ಹೊಂದಬೇಕು.
ಕ್ರಿಕೆಟ್ನ ವಿಷಯಗಳನ್ನು ಕ್ರಿಕೆಟರ್ಗಳೇ ನಿಭಾಯಿಸಬೇಕು, ಕ್ರಿಕೆಟೇತರ ವಿಷಯಗಳನ್ನು ಸಿಇಓ ಸೇರಿದಂತೆ ಇತರರು ನಿಭಾಯಿಸಬೇಕು ಎಂದಿದೆ.
ಬಿಸಿಸಿಐ ಅಧಿಕಾರಿಗಳು ಸಚಿವರುಗಳು ಅಥವಾ ಸರ್ಕಾರಿ ಉದ್ಯೋಗಿಗಳಾಗಿರಬಾರದು. 70 ವರ್ಷಕ್ಕಿಂತ ಮೇಲ್ಪಟ್ಟವರೂ ಆಗಿರಬಾರದು ಎಂಬಿತ್ಯಾದಿ ಸಲಹೆಗಳನ್ನು ಲೋಧ ಸಮಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.