ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಹೊಸ ವರ್ಷ ಸಂತಸ ತರಲಿದೆ. ಭಾರತದಲ್ಲಿ ಕೆಲವು ಕ್ಷೇತ್ರಗಳಾದ ವಿದೇಶಿ ನೇರ ಬಂಡವಾಳ, ಸುಧಾರಣಾ ಉಪಕ್ರಮಗಳು, ಮೇಕ್ ಇನ್ ಇಂಡಿಯಾ 2016ರಲ್ಲಿ ಸುಮಾರು 3.5 ಮಿಲಿಯನ್ ಉದ್ಯಾಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ ಎಂದು ಟೀಮ್ಲೀಡಸ್ ಸರ್ವೀಸಸ್ ಅಧ್ಯಕ್ಷ ರಿತುಪರ್ಣ ಚಕ್ರಬರ್ತಿ ತಿಳಿಸಿದ್ದಾರೆ.
ಚಿಲ್ಲರೆ ವ್ಯಾಪಾರ, ಆಪ್ ಎಕಾನಮಿ ಮತ್ತು ಅಟೊಮೊಬೈಲ್ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ರೀಟೇಲ್ ಕ್ಷೇತ್ರದಲ್ಲಿ 1.2 ಮಿಲಿಯನ್, ಅಟೋಮೊಬೈಲ್ ಕ್ಷೇತ್ರದಲ್ಲಿ 6,50,000, ಆಪ್ ಎಕಾನಮಿ ಕ್ಷೇತ್ರದಲ್ಲಿ 6,00,000, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮಾ ಕ್ಷೇತ್ರದಲ್ಲಿ 3,00,000, ಐಟಿ ವಿಭಾಗದಲ್ಲಿ 2,70,000 ಹಾಗೂ ಇ-ಕಾಮರ್ಸ್ ಕ್ಷೇತ್ರದಲ್ಲಿ 300000 ಉದ್ಯೋಗಾವಕಾಶಗಳುಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಟೀಮ್ಲೀಸ್ ನಿರೀಕ್ಷಿಸಿದೆ.
ಯಂತ್ರೋಪಕರಣ ಮತ್ತು ಉತ್ಪಾದನೆ ಕ್ಷೇತ್ರದಲ್ಲಿ ಉದ್ಯೋಗ ನೇಮಕಾತಿಯಲ್ಲಿ ಶೇ.42ರಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಮ್ಯಾನ್ಪವರ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಎ.ಜಿ.ರಾವ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.