ನವದೆಹಲಿ: ವಿಶ್ವದಾದ್ಯಂತ ಭಾರೀ ಖ್ಯಾತಿಯನ್ನು ಪಡೆದಿರುವ ಯೋಗವನ್ನು ಸಾರ್ವಜನಿಕ ಅನುದಾನಿತ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದಲ್ಲಿ ಅಳವಡಿಸಲು ಯುಜಿಸಿ ನಿರ್ಧರಿಸಿದೆ.
2016-17ರ ಅಕಾಡಮಿಕ್ ಸೆಷನ್ನಿಂದ 40 ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಯೋಗ ವಿಷಯದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿಗಳನ್ನು ಆರಂಭವಿಸುವ ಸಲುವಾಗಿ ಪ್ರಸ್ತಾವಣೆಗಳನ್ನು ಸಿದ್ಧಪಡಿಸಿದೆ. ಬಳಿಕ ಇದನ್ನು ರಾಜ್ಯ ಮತ್ತು ಅನುದಾನಿತ ವಿಶ್ವವಿದ್ಯಾನಿಯಲದಲ್ಲೂ ವಿಸ್ತರಿಸುವ ಯೋಚನೆಯಿದೆ.
‘ಮಾನವ ಆರೋಗ್ಯದ ಮೇಲೆ ಯೋಗ ಮತ್ತು ಧ್ಯಾನದ ಧನಾತ್ಮಕ ಪರಿಣಾಮಗಳ ವೈಜ್ಞಾನಿಕ ಸಾಕ್ಷಿಯನ್ನು ಬಲಪಡಿಸಲು ಭಾರತೀಯ ವಿಶ್ವವಿದ್ಯಾನಿಲಯಗಳು ಕ್ರಮನಿರ್ವಹಿಸುತ್ತದೆ. ಯೋಗದಲ್ಲಿ ಶಿಕ್ಷಣ ಮತ್ತು ಅಭ್ಯಾಸವನ್ನು ಪಡೆಯಲು ವಿಶ್ವವಿದ್ಯಾನಿಲಯಗಳಲ್ಲಿ ಯೋಗ ಸೆಂಟರ್ ಮತ್ತು ಡಿಪಾರ್ಟ್ಮೆಂಟ್ಗಳನ್ನು ಸ್ಥಾಪಿಸಲಿದ್ದೇವೆ’ ಎಂದು ಪ್ರಸ್ತಾವಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.