ನವದೆಹಲಿ: ಪಠಾನ್ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ವಿಷಯವನ್ನು ಭಾರತ ಸರ್ಕಾರ ಪಾಕಿಸ್ಥಾನದೊಂದಿಗೆ ಸೋಮವಾರ ಪ್ರಸ್ತಾಪಿಸಲಿದ್ದು, ದಾಳಿ ನಡೆಸಿದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಲಿದೆ.
ಜೈಶೇ ವಿರುದ್ಧ ಸಾಕಷ್ಟು ಮಾಹಿತಿಗಳನ್ನು ಮತ್ತು ಸಾಕ್ಷಿಗಳನ್ನು ಕಲೆ ಹಾಕಿದೆ, ವಾಯುನೆಲೆಯ ಮೇಲಿನ ದಾಳಿಗೆ ಆ ಸಂಘಟನೆಯೇ ಕಾರಣ ಎಂಬುದೂ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ 75 ಗಂಟೆಗಳೊಳಗೆ ಜೈಶೇ ಮೊಹಮ್ಮದ್ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತ ಪಾಕಿಸ್ಥಾನಕ್ಕೆ ಆಗ್ರಹಿಸಲಿದೆ.
ಜೈಶೇ ವಿರುದ್ಧ ಪಾಕಿಸ್ಥಾನ ತೆಗೆದುಕೊಂಡರೇ ಮಾತ್ರ ನಿಗಧಿಯಾಗಿರುವ ಉಭಯ ದೇಶಗಳ ನಡುವಣ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಲು ಸಾಧ್ಯ ಎನ್ನಲಾಗಿದೆ.
ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬುದನ್ನು ಭಾರತ ಪಾಕಿಸ್ಥಾನಕ್ಕೆ ಮತ್ತೊಮ್ಮೆ ಸ್ಪಷ್ಟಪಡಿಸುವ ಸಾಧ್ಯತೆ ಇದೆ.
ಶನಿವಾರ ಪಜಾಬ್ನ ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ 7 ಯೋಧರು ಮೃತಪಟ್ಟಿದ್ದಾರೆ ಮತ್ತು 20 ನಾಗರಿಕರಿಗೆ ಗಾಯಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.