ಪಠನ್ಕೋಟ್: ಪಂಜಾಬಿನ ಪಠನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿ ಪರಾರಿಯಾಗಿರುವ ಉಗ್ರರಿಗಾಗಿ ಭಾರೀ ಕಾರ್ಯಾಚರಣೆ ನಡೆಯುತ್ತಿದೆ. ನಾಲ್ವರು ಉಗ್ರರನ್ನು ಈಗಾಗಲೇ ಹೊಡೆದುರುಳಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯಗಳು ನಡೆಯುತ್ತಿದೆ.
ಪಂಜಾಬ್ನಲ್ಲಿಯೇ ಉಗ್ರರು ಅವಿತಿರುವ ಹಿನ್ನಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆಯನ್ನು ವಿಸ್ತಾರಗೊಳಿಸಿದೆ. ಈ ವೇಳೆ ಗುಂಡಿನ ಚಕಮಕಿ, ಗ್ರೆನೇಡ್ ದಾಳಿಗಳನ್ನು ನಡೆಸಲಾಗಿದೆ.
ಉಗ್ರ ಸಂಘಟನೆ ಜೈಶೇ-ಇ-ಮೊಹಮ್ಮದ್ ಈ ದಾಳಿಯನ್ನು ನಡೆಸಿದ್ದು, ದಾಳಿಕೋರರು ಪಾಕಿಸ್ಥಾನದ ಭಲ್ಪುರ್ನಿಂದ ಬಂದಿದ್ದಾರೆ, ಅವರಿಗೆ ವಾಯುನೆಲೆಯನ್ನು ಸ್ಫೋಟಿಸುವ ಆದೇಶ ನೀಡಲಾಗಿತ್ತು ಎನ್ನಲಾಗಿದೆ.
ಪಠನ್ಕೋಟ್ ವಾಯುನೆಲೆ ಪಾಕಿಸ್ಥಾನ ಗಡಿಯಿಂದ 50ಕಿ.ಮೀ ಮಾತ್ರ ದೂರದಲ್ಲಿದೆ. ಗುಪ್ತಚರ ಇಲಾಖೆ ಈ ವಾಯುನೆಲೆಯ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಈ ಹಿಂದೆಯೇ ಮಾಹಿತಿ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.