ನವದೆಹಲಿ: ಸಮ-ಬೆಸ ನಿಯಮಕ್ಕೆ ದೆಹಲಿ ಜನತೆ ನೀಡಿದ ಸಹಕಾರವನ್ನು ಕಂಡು ಸಂತುಷ್ಟನಾಗಿದ್ದೇನೆ, ಆದರೆ ಈ ನಿಯಮವನ್ನು ಶಾಶ್ವತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
‘ಪರೀಕ್ಷಾರ್ಥವಾಗಿ ಪ್ರಯೋಗಿಸಿದ ಈ ನಿಯಮ ಈಗ ದೆಹಲಿಯಲ್ಲಿ ಚಳುವಳಿಯಾಗಿ ರೂಪುಗೊಂಡಿದೆ, ಸರ್ಕಾರದ ವರದಿಯ ಪ್ರಕಾರ ಈ ನಿಯಮ ತಕ್ಕ ಮಟ್ಟಿನ ಯಶಸ್ಸನ್ನು ಕಂಡಿದೆ, ಸಮ-ಬೆಸ ನಿರ್ಬಂಧವನ್ನು ದೆಹಲಿ ಜನ ತೆರೆದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ’ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಪ್ರಸ್ತುತ ಈ ನಿಯಮ ಜ.೧೫ರವರೆಗೆ ಮಾತ್ರ ಇರಲಿದೆ. ಶಾಶ್ವತವಾಗಿ ಇದನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ. ಮುಂದೆ ಈ ಬಗೆಗಿನ ತೀರ್ಮಾನವನ್ನು ಸಭೆ ನಡೆಸಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
‘ದೆಹಲಿಗರೇ ನೀವು ಸಾಧಿಸಿ ತೋರಿಸಿದ್ದೀರಿ, ದೊಡ್ಡ ದೊಡ್ಡ ಸವಾಳನ್ನು ಎದುರಿಸಲು ನೀವು ಸಿದ್ಧ ಎಂಬ ಭರವಸೆಯನ್ನು ನನಗೆ ನೀಡಿದ್ದೀರಿ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.