ನವದೆಹಲಿ: ಪಾಕಿಸ್ಥಾನಿ ಮೂಲದ ಗಾಯಕ ಅದ್ನಾನ್ ಸಾಮಿ ಅವರಿಗೆ ಭಾರತೀಯ ನಾಗರಿಕತ್ವವನ್ನು ನೀಡಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಗುರುವಾರ ಘೋಷಿಸಿದೆ.
2016 ರ ಜ.1 ರಿಂದ ಅವರ ನಾಗರಿಕತ್ವ ಅನ್ವಯವಾಗಲಿದ್ದು, ಭಾರತೀಯ ಎನಿಸಿಕೊಳ್ಳಲಿದ್ದಾರೆ.
43 ವರ್ಷದ ಈ ಗಾಯಕನ ನಾಗರಿಕತ್ವ ಮನವಿ ಎರಡು ವರ್ಷಗಳ ಹಿಂದೆ ತಿರಸ್ಕಾರಗೊಂಡಿತ್ತು, ಮತ್ತೆ ಅವರು ಈ ವರ್ಷದ ಆರಂಭದಲ್ಲಿ ಗೃಹಸಚಿವಾಲಯದ ಫಾರಿನರ್ ಡಿವಿಷನ್ಗೆ ಅರ್ಜಿ ಸಲ್ಲಿಸಿದ್ದರು.
ಲಾಹೋರ್ ಮೂಲದ ಅದ್ನಾನ್ 2001, ಮಾ.13ರಂದು ಒಂದು ವರ್ಷ ಅವಧಿಯ ವಿಸಿಟರ್ ವೀಸಾ ಮೂಲಕ ಭಾರತಕ್ಕೆ ಮೊತ್ತ ಮೊದಲ ಬಾರಿಗೆ ಆಗಮಿಸಿದ್ದರು. ಪಾಕಿಸ್ಥಾನಿ ವೀಸಾವನ್ನು ಸಮಯ ಸಮಯಕ್ಕೆ ನವೀಕರಿಸಿ ಭಾರತದಲ್ಲಿ ತಂಗಿದ್ದರು.
ಆದರೆ ಮೇ.27, 2012ರಂದು ಅವರಿಗೆ ನೀಡಲಾದ ಪಾಕ್ ಪಾಸ್ಪೋರ್ಟ್ನ ಅವಧಿ ಮೇ.26, 2015ರಂದು ಮುಕ್ತಾಯವಾಗಿತ್ತು. ಆದರೆ ಆ ಬಳಿಕ ಅದನ್ನು ಪಾಕಿಸ್ಥಾನ ಸರ್ಕಾರ ನವೀಕರಿಸಲಿಲ್ಲ.
ಬಳಿಕ ಅದ್ನಾನ್ ಭಾರತ ಸರ್ಕಾರವನ್ನು ಸಂಪರ್ಕಿಸಿ ಮಾನವೀಯ ನೆಲೆಯಲ್ಲಿ ಭಾರತದಲ್ಲಿ ತಂಗಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡರು. ಈ ವರ್ಷದ ಆರಂಭದಲ್ಲಿ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.