ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಹತ್ವಾಕಾಂಕ್ಷೆಯ ದೆಹಲಿ-ಮೀರತ್ 14 ಲೇನ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ‘ಇಲ್ಲಿ ರಸ್ತೆಯನ್ನು ನಿರ್ಮಿಸಲಾಗುತ್ತಿಲ್ಲ, ಅಭಿವೃದ್ಧಿಯ ರಾಜಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಅಭಿವೃದ್ಧಿಯೊಂದಿಗೆ ಕನೆಕ್ಟ್ ಆಗಬೇಕಾದರೆ ಮೊದಲು ತಮ್ಮ ಗ್ರಾಮವನ್ನು ಉತ್ತಮ ರಸ್ತೆಗಳೊಂದಿಗೆ ಕನೆಕ್ಟ್ ಮಾಡಬೇಕೆಂಬುದು ಗ್ರಾಮೀಣ ಜನರಿಗೆ ತಿಳಿದಿದೆ. ಈ ರಸ್ತೆ ಮಾಲಿನ್ಯ ಮುಕ್ತ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ’ ಎಂದರು.
ಗ್ರಾಮೀಣ ಜನರ ಕನೆಕ್ಟಿವಿಟಿ ಹೆಚ್ಚಿಸಲು ಅಟಲ್ ಜೀ ಅವರು ಹಲವಾರು ಯೋಜನೆಗಳನ್ನು ತಂದರು. ಸ್ವರ್ಣ ಚತುಷ್ಪಥದ ಮೂಲಕ ಭಾರತವನ್ನು ಕನೆಕ್ಟ್ ಮಾಡಲು ಶ್ರಮಿಸಿದರು, ಗ್ರಾಮೀಣ ಭಾರತವನ್ನು ಕನೆಕ್ಟ್ ಮಾಡಲು ಗ್ರಾಮ್ ಸಡಕ್ ಯೋಜನೆಯನ್ನು ತಂದರು.
ಈಗಿನ ದಿನಗಳಲ್ಲಿ ಬಡ ಮಧ್ಯಮ ವರ್ಗ, ಮಧ್ಯಮ ವರ್ಗ ಕುಟುಂಬಗಳೂ ವೀಕೆಂಡ್ನಲ್ಲಿ ಔಟಿಂಗ್ ಹೋಗಲು ಬಯಸುತ್ತವೆ, ಅವರಿಗೆ ದೆಹಲಿಯ ಉತ್ತಮ ಮಾರ್ಗಗಳು ಸಹಕಾರಿಯಾಗಲಿದೆ. ಕ್ಲಾಸ್ 3 ಮತ್ತು 4 ಉದ್ಯೋಗಿಗಳಿಗೆ ನಾವು ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸುತ್ತೇವೆ. ಈಗ ನೇಮಕಾತಿ ಮೆರಿಟ್ ಆಧಾರದಲ್ಲೇ ನಡೆಯುತ್ತದೆ. ಇದನ್ನು ಉತ್ತರಪ್ರದೇಶದಲ್ಲೂ ಜಾರಿಗೆ ತನ್ನಿ ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.