ನವದೆಹಲಿ: ಕೆಲವು ದಾಖಲೆಗಳಿಗೆ ಸಹಿ ಹಾಕಲಿಲ್ಲ ಎಂಬ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಅವರ ಈ ಕ್ರಮ ಈಗ ಅವರಿಗೆಯೇ ತಿರುಗು ಬಾಣವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಲದೇ ಕೇಂದ್ರ ಮತ್ತೆ ಅವರ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಕಲ್ಪಿಸಲಿದೆ.
ಪ್ರಾಸಿಕ್ಯೂಶನ್ನ ವಿಶೇಷ ಕಾರ್ಯದರ್ಶಿ ಯಶ್ಪಾಲ್ ಗಾರ್ಗ್ ಮತ್ತು ಬಂಧಿಖಾನೆಯ ವಿಶೇಷ ಕಾರ್ಯದರ್ಶಿ ಸುಭಾಷ್ ಚಂದ್ರ ಅವರನ್ನು ಅಮಾನತುಗೊಳಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಫೈಲ್ಗೆ ಲೆ.ಗವರ್ನರ್ ಅನುಮೋದನೆ ಇಲ್ಲದೇ ಇವರು ಸಹಿ ಹಾಕಲು ನಿರಾಕರಿಸಿದ ಕಾರಣ ಇವರನ್ನು ಕೇಜ್ರಿವಾಲ್ ಅಮಾನತುಗೊಳಿಸಿದ್ದಾರೆ.
ಅವರ ಈ ಕ್ರಮವನ್ನು ಕ್ರಮವನ್ನು ಖಂಡಿಸಿ ೨೦೦ ಅಧಿಕಾರಿಗಳು ಗುರುವಾರ ಸಾಮೂಹಿಕವಾಗಿ ರಜೆ ಹಾಕಲಿದ್ದಾರೆ. ಇವರಲ್ಲಿ ಹೆಚ್ಚಿನವರು ಸಾರಿಗೆ ಅಧಿಕಾರಿಗಳು. ರೋಡ್ ರೇಶನಿಂಗ್ ಪ್ಲ್ಯಾನ್ ಮಾಡುವವರು. ಹೀಗಾಗಿ ಸಮ-ಬೆಸ ನಿಯಮವನ್ನು ಇಂದು ಜಾರಿಗೊಳಿಸಲು ಮುಂದಾಗಿರುವ ಸರ್ಕಾರಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.
ಮೂಲಗಳ ಪ್ರಕಾರ ಕೇಂದ್ರ ಗೃಹಸಚಿವಾಲಯ ಅಧಿಕಾರಿಗಳ ಅಮಾನತನ್ನು ರದ್ದುಗೊಳಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.