ಬಂಟ್ವಾಳ: ಶತಮಾನದ ಅದ್ಭುತಗಳಲ್ಲೊಂದಾದ ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವವು ಎ.14 ರಿಂದ 17ರ ತನಕ ಜರುಗಲಿದೆ ಎಂದು ದೇವಳದ ಧರ್ಮದರ್ಶಿಗಳಾದ ರವಿ.ಎನ್ ನಡುಬೊಟ್ಟು ತಿಳಿಸಿದ್ದಾರೆ.
ಎ.14ರಂದು ಬೆಳಿಗ್ಗೆ ನವ ಪ್ರಧಾನ ಕಲಾಶಾಭಿಷೇಕದೊಂದಿಗೆ ವೈದಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದ್ದು ಬೆಳಿಗ್ಗೆ ಗಂಟೆ 11.30ಕ್ಕೆ ರಾಜನ್ ದೈವ, ಅಂಗಣ ಪಂಜುರ್ಲಿ ಮತ್ತು ಅಂಗನವಲಸರಿ ನೇಮೋತ್ಸವ ಜರುಗಲಿದೆ. ಮಧ್ಯಾಹ್ನ ಗಂಟೆ 3ಕ್ಕೆ ಕಲ್ಲುರ್ಟಿ ದೈವದ ಸಂಕ್ರಮಣ ಕೋಲ ಉತ್ಸವ ಜರಗಲಿದೆ.
ರಾತ್ರಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ ಅಳದಂಗಡಿ ಅರಮನೆ ಇವರ ದಿವ್ಯ ಉಪಸ್ಥಿತಿಯಲ್ಲಿ ರಾಜ್ಯ ಕೊಡಮಣಿತ್ತಾಯ ಮತ್ತು ಬ್ರಹ್ಮ ಮುಜಿಲ್ಯಯ ದೈವಗಳಿಗೆ ಧರ್ಮನೇಮೋತ್ಸವ ಜರುಗಲಿದೆ. ರಾತ್ರಿ ಗಂಟೆ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಎ.15ರಂದು ಬೆಳಿಗ್ಗೆ 11.30ಕ್ಕೆ ಸಂಕೋಲೆ ಗುಳಿಗ ನೇಮೋತ್ಸವ ಸಂಜೆ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಎ.16ರಂದು ಬೆಳಿಗ್ಗೆ ಕವಾಟೋದ್ಘಾಟನೆ ದಿವ್ಯದರ್ಶನ, ಮಲರಾಯ ಒಂಟಿ ಪಂಜುರ್ಲಿ ಬಂದ ದೈವದ ನೇಮೋತ್ಸವ ರಾತ್ರಿ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಎ.17 ರಂದು ನಾಗದೇವರ ಸನ್ನಿಧಾನದಲ್ಲಿ 108 ಕಳಸ, ಅಶ್ಲೇಷ ಬಲಿ ಸೇವೆ, ಶಾಂತಿ ಹೋಮ, ವದು ಆರಾಧನೆ ಪ್ರಸನ್ನ ಪೂಜೆ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ರಾತ್ರಿ 10ಕ್ಕೆ ಶ್ರೀ ಮಂಜುನಾಥ ಭಟ್ ಇವರ ಮಾರ್ಗದರ್ಶನದಲ್ಲಿ ಮದ್ದೂರು ಶ್ರೀ ಕೃಷ್ಣ ಪ್ರಸಾದ ವೈದ್ಯ ಬಳಗದವರ ಸಹಕಾರದೊಂದಿಗೆ ನಾಗಪಾತ್ರಿ ವೇದಮೂರ್ತಿ ಶ್ರೀ ರಮಾನಂದ ಸಾಮಗ ಬೆಳ್ಳಿರ್ಪಾಡಿ ಇವರಿಂದ ಅಷ್ಟಪವಿತ್ರ ನಾಗಬ್ರಹ್ಮ ಮಂಡಲೋತ್ಸವವು ಜರುಗಲಿದೆ.
ವಾರ್ಷಿಕ ಜಾತ್ರೆ ಮತ್ತು ಬ್ರಹ್ಮ ನಾಗಮಂಡಲೋತ್ಸವ ಸಮಿತಿ ಪಧಾಧಿಕಾರಿಗಳು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು, ಅಳದಂಗಡಿ ಅರಮನೆ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ (ಗೌರವಾಧ್ಯಕ್ಷರು) ಶ್ರೀಮತಿ ಚಂದ್ರಾವತಿ ಮತ್ತು ಶ್ರೀ ಚೆನ್ನಪ್ಪ ಮೂಲ್ಯ ಶ್ರೀ ಕ್ಷೇತ್ರ ನಡುಬೊಟ್ಟು, ಜಿತೇಂದ್ರ ಸಾಲ್ಯಾನ್ ಬಿ.ಸಿರೋಡು(ಅಧ್ಯಕ್ಷರು), ಸುಂದರರಾಜ್ ಹೆಗ್ಡೆ ಮುಂಬಯಿ(ಕಾರ್ಯಾಧ್ಯಕ್ಷರು) ವಸಂತ ಹೆಗ್ಡೆ ಪಾದೆಗುತ್ತು, ಉಮೇಶ್ ಕೆ ಕಡೆಗೋಳಿ, ಮೋಹನ್ ಬಿ. ಬಿ.ಸಿರೋಡು, ಪದ್ಮನಾಭ ವಿಟ್ಲ, ಪ್ರಕಾಶ ಶೆಟ್ಟಿ ಗಾಣದಕೊಟ್ಯ, ಹರೀಶ್ ಕಾರಿಂಜ ನಾವೂರು (ಉಪಾಧ್ಯಕ್ಷರು), ಆಶೋಕ ಕೂಳೂರು(ಪ್ರಧಾನ ಕಾರ್ಯದರ್ಶಿ), ದೇವಪ್ಪ ಕುಮಾರ್ ಮಂಜಿಕಲ್ಲು ಕಾರ್ಯದರ್ಶಿ, ಸ್ವರ್ಣಲತಾ ಹೆಗ್ಡೆ ಬೆಂಗಳೂರು ಕೋಶಾಧಿಕಾರಿ, ಚಿದಾನಂದ ಶೆಟ್ಟಿ(ಜೊತೆ ಕೋಶಾಧಿಕಾರಿ) ರಮೇಶ ಪಣೋಲಿಬೈಲು, ಶ್ರೀನಿವಾಸ ಚಾರ್ಮಾಡಿ, ಲಕ್ಷ್ಮಣ ಅಗ್ರಬೈಲು, ಭಾಸ್ಕರ ಅಜೆಕಲ(ಜೊತೆ ಕಾರ್ಯದರ್ಶಿಗಳು) ಧಾರ್ಮಿಕ ಸಭಾರಂಗದಲ್ಲಿ ನಾಡಿನ ಯತಿ ಶ್ರೇಷ್ಠರು.
ಧಾರ್ಮಿಕ ಮುಖಂಡರು ಮತ್ತು ಸಮಾಜದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದೇವಳದ ಆಡಳಿತ ಮೊಕ್ತೇಸರ ವಿಶ್ವನಾಥ ಎನ್ ನಡುಬೊಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.