ಹೈದರಾಬಾದ್: ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್ಗೆ ಸೇರ ಹೊರಟ ಮತ್ತೆ ಮೂವರು ಯುವಕರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ತಡರಾತ್ರ ಇವರ ಬಂಧನವಾಗಿದ್ದು, ಇವರಿಂದ ಮೊಬೈಲ್, ಟ್ಯಾಬ್ಲೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಶ್ಮೀರದ ಮೂಲಕ ಅಫ್ಘಾನಿಸ್ಥಾನಕ್ಕೆ ತೆರಳಿ ಅಲ್ಲಿಂದ ಇರಾಕ್, ಸಿರಿಯಾಗೆ ಪಲಾಯಣ ಮಾಡಲು ಇವರು ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಈ ಮೂವರನ್ನೂ ಕಾನೂನು ಬಾಹಿರ ಚಟುವಟಿಕೆಯ ಆರೋಪದಡಿ ಬಂಧಿಸಲಾಗಿದೆ.
ಈಗಾಗಲೇ ಹಲವಾರು ಮಂದಿ ಇಸಿಸ್ಗೆ ಸೇರ ಹೊರಟವರನ್ನು ಬಂಧಿಸಲಾಗಿದೆ, ಭಾರತದ ಯುವಕರಲ್ಲಿ ಇಸಿಸ್ನ ಉಗ್ರ ಸಿದ್ಧಾಂತಗಳು ಪ್ರಭಾವ ಬೀರುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.