ಇಸ್ಲಾಮಾಬಾದ್: ತಾರಮಂಡಲಕ್ಕೆ ಪಾಕಿಸ್ಥಾನ ಮಕ್ಕಳ ಹಕ್ಕು ಹೋರಾಟಗಾರ್ತಿ, ನೋಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸೂಫ್ ಝಾಯಿ ಅವರ ಹೆಸರಿಟ್ಟ ಬಳಿಕ ಇದೀಗ ಖಗೋಳಜ್ಞೆ ಅಮಿ ಮೈಂಝರ್ ಅವರ ಹೆಸರಿನ್ನಿಡಲಾಗಿದೆ.
316201 ಎಂಬ ತಾರಾಮಂಡಲಕ್ಕೆ ಮಲಾಲಾ ಹೆಸರಿಟ್ಟ ಬೆನ್ನಲ್ಲೇ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ನಾಸಾದ ಜೆಟ್ ಶೋಧನ ಪ್ರಯೋಗಾಲಯದಲ್ಲಿ ಖಗೋಳ ಶಾಸ್ತ್ರಜ್ಞೆಯಾಗಿರುವ ಅಮಿ ಮೈಂಜರ್ ಅವರ ಹೆಸರನ್ನು ಇಡಲಾಗಿದೆ.
ಇದಕ್ಕೆ ಸಂತಸ ವ್ಯಕ್ತವಾಗಿರುವ ಮೈಂಜರ್ ‘ಮಲಾಲಾ ಬಳಿಕ ತಾರಾಮಂಡಲಕ್ಕೆ ನನ್ನ ಹೆಸರು ಇಟ್ಟಿರುವುದು ಒಂದು ದೊಡ್ಡ ಗೌರವ. ಸಾಕಷ್ಟು ತಾರಾಮಂಡಲಗಳಿಗೆ ಹೆಸರು ನೀಡಲಾಗಿದೆಯಾದರೂ ಮಹಿಳೆಯ ಹೆಸರನ್ನು ಪರಿಗಣಿಸಿದ್ದು ಕಡಿಮೆ’ ಎಂದು ಹೇಳಿದ್ದಾರೆ.
ಕ್ಷುದ್ರ ಗ್ರಹ ಮಂಗಳ ಮತ್ತು ಗುರುವಿನ ನಡುವಿನ ಮುಖ್ಯಪಟ್ಟಿಯಲ್ಲಿ ಇದೆ ಎಂದು ಆಮಿ ೨೦೧೦ರಲ್ಲಿ ಪತ್ತೆ ಹಚ್ಚಿದ್ದರು. ಇದಕ್ಕಾಗಿ ಅವರಿಗೆ ಈ ಶ್ರೇಷ್ಠ ಗೌರವ ಸಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.