ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತಕಾಲೇಜಿನ 50 ನೇ ವರ್ಷದ ಸಂಭ್ರಮಾಚರಣೆ ಸಂದರ್ಭ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಸಂಜೆ ನಡೆದ 2ನೇ ದಿನದಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿತು. ಸೇರಿದ್ದ ಪ್ರೇಕ್ಷಕರರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಲ್ಲಿನತೆಯಿಂದ ವೀಕ್ಷಿಸಿದರು. ಸುವರ್ಣ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲ್ಪಟ್ಟ ಕಾರ್ಯಕ್ರಮ 2 ದಿನದಲ್ಲೂ ನೆರೆದಿದ್ದ ಜನರಲ್ಲಿ 50 ರ ಸಂಭ್ರಮದ ನೆನಪನ್ನು ಮನದಲ್ಲಿ ಅಚ್ಚೊತ್ತಿ ಉಳಿಯುವ ದಿನ.
ಎರಡನೇ ದಿನ ಮೊದಲ ಕಾರ್ಯಕ್ರಮವನ್ನುಬಾಲಿವುಡ್ನ ಹಿನ್ನಲೆ ಗಾಯಕ ಕಾರ್ತಿಕ್ಅವರ ಸೊಗಸಾದ ಹಾಡುಗಳೊಂದಿಗೆ ಭಾರತದಖ್ಯಾತ ಫ್ಯೂಶನ್ಯೋಜನೆಅರ್ಕಕಾರ್ಯಕ್ರಮ ಪ್ರೇಕ್ಷರನ್ನುತಾಳ ಹಾಕುವಂತೆ ಪ್ರೇರೆಪಿಸಿತು. ದೇಶ-ವಿದೇಶದಲ್ಲಿಕಾರ್ಯಕ್ರಮವನ್ನು ನೀಡುತ್ತಿರುವ ಈ ತಂಡಉಜಿರೆಯ ೫೦ರ ಸಂಭ್ರಮದಲ್ಲೂ ನೆರೆದಿದ್ದವರನ್ನು ಮನೋಲ್ಲಾಸಿತರನ್ನಾಗಿಸಿತು. ಕಾರ್ತಿಕ್ಅವರ ಗಾಯನಕ್ಕೆ ಸಾಥ್ ಕೊಟ್ಟಖಂಜಿರ ಮತ್ತು ಪರ್ಕ್ಯೂಷನ್ಸ್ನಲ್ಲಿ ಸೆಲ್ವಗಣೇಶ್, ಗಿಟಾರ್ನಲ್ಲಿ ಪ್ರಾನ್ಸ್ನ ಮಿಶ್ಕೋ, ಎಕೋಯಿಸ್ಟಿಕ್ ಮತ್ತುಎಲೆಕ್ಟ್ರಿಕ್ಗಿಟಾರ್ ಸಂತೋಷ್ಚಂದ್ರನ್ತಮ್ಮ ಕೈಚಳಕವನ್ನು ತೋರಿಸಿದರು.
ಎಸ್ಡಿಎಂ ಪಿಯುಕಾಲೇಜಿನ ವಿದ್ಯಾರ್ಥಿಗಳಿಂದ ವೆಸ್ಟರ್ನ್ಡಾನ್ಸ್ತುಂಬ ಚೆನ್ನಾಗಿ ಮೂಡಿ ಬಂತು.ಕೋರಿಯೋಗ್ರಾಫಿ ಹಾಗೂ ವಿದ್ಯಾರ್ಥಿಗಳ ನಡುವಿನ ಹೊಂದಾಣಿಕೆ ಹಾಗೂ ಅವರು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರನ್ನು ಹೆಜ್ಜೆ ಹಾಕುವಂತಿತ್ತು. ತುಳುನಾಡಿನ ಸಂಸ್ಕೃತಿಯನ್ನುಬಿಂಬಿಸುವ ದೈವ ನರ್ತನದಂತೆ ಕೇರಳ ರಾಜ್ಯದಲ್ಲಿ ತುಂಬಾ ಪ್ರಸಿದ್ದಿಯ ನೃತ್ಯತೈಯಂ. ಕಣ್ಣೂರಿನ ಸಂತೋಷ್ ಮತ್ತು ಬಳಗ ತೈಯ್ಯಂನೃತ್ಯವನ್ನು ಮನೋಜ್ಞವಾಗಿ ಪ್ರದರ್ಶಿಸಿದರು.
ಎಸ್ಡಿಎಂನ ವಿದ್ಯಾರ್ಥಿಗಳಿಂದ ಭರತ ನೃತ್ಯ, ಡಾಂಡಿಯ ನೃತ್ಯ ಹಾಗೂ ಡೊಳ್ಳು ಕುಣಿತ ನೃತ್ಯಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ನೆರೆದಿದ್ದ ಸಾವಿರಾರುಜನರನ್ನು ರಂಜಿಸಿದರು.ಪಶ್ವಿಮ ಬಂಗಾಳದ ಪುರುಲಿಯಾ ಚ್ಚಾವೊ ನೃತ್ಯತಂಡದಿಂದಅಲ್ಲಿನ ಸಾಂಪ್ರಾದಾಯಿಕವಾದ ನೃತ್ಯ ಪ್ರಕಾರಗಳನ್ನುಮಹಿಷಾಸುರ ಮರ್ದಿನಿ ನೃತ್ಯದ ಮೂಲಕ ಇಲ್ಲಿನಜನತೆಗೆ ಪರಿಚಯಿಸಿಕೊಟ್ಟರು.ಕೊನೆಯಕಾರ್ಯಕ್ರಮವಾಗಿರಾಜ ವೈಭವಗಳನ್ನು ಬಿಂಬಿಸುವ, ಉತ್ತಮ ಕೊರಿಯೊಗ್ರಾಫಿಯಯ ಅದ್ದೂರಿಯ ಸೆಟ್ನೊಂದಿಗೆ ಫ್ಯೂಶನ್ ಡಾನ್ಸ್ನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.