ನವದೆಹಲಿ: ಜರ್ಮನಿ ಪ್ರವಾಸದ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಮೋದಿ ಅವರು ನೇತಾಜೀ ಅವರ ಸೋದರ ಮೊಮ್ಮಗ ಹಾಗೂ ಖ್ಯಾತ ಉದ್ಯಮಿ ಸೂರ್ಯ ಬೋಸ್ ಅವರನ್ನು ಬರ್ಲಿನ್ನಲ್ಲಿ ಭೇಟಿಯಾಗಲಿದ್ದಾರೆ’ ಎಂದು ಮೇಲ್ ಟುಡೇ ವರದಿ ಮಾಡಿದೆ.
ಸೂರ್ಯ ಬೋಸ್ ಅವರು ಹಂಬರ್ಗ್ನಲ್ಲಿನ ಇಂಡೋ-ಜರ್ಮನ್ ಅಸೋಸಿಯೇಶನ್ನಿನ ಮುಖ್ಯಸ್ಥರಾಗಿದ್ದಾರೆ. ಇದನ್ನು ಅವರ ಮಾವ ಸ್ಥಾಪಿಸಿದ್ದಾರೆ.
ಮಾಜಿ ಪ್ರಧಾನಿ ನೆಹರೂ ಅವರು ಬೋಸ್ ಕುಟುಂಬದ ಮೇಲೆ ನಿರಂತರ 20 ವರ್ಷಗಳ ಕಾಲ ಗೂಢಚರ್ಯೆ ನಡೆಸಿದ್ದರು ಎಂಬ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಮೋದಿ ಬೋಸ್ ಕುಟುಂಬಸ್ಥರನ್ನು ಭೇಟಿಯಾಗುತ್ತಿರುವುದು ಕುತೂಹಲ ಕೆರಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.