ಕಾರ್ಕಳ: ನೂರು ನೂತನ ದೇಗುಲ ನಿರ್ಮಾಣದ ಬದಲು ಒಂದು ಹಳೇ ದೇವಳದ ಜೀರ್ಣೋದ್ಧಾರವು ಮಹತ್ವವನ್ನು ಪಡೆಯುತ್ತದೆ. ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಭಕ್ತರು ಒಗ್ಗೂಡಿದಾಗ ಅಲ್ಲಿ ದೈವೀ ಶಕ್ತಿ ಸಂಪನ್ನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ಪರಮಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಕಲಶೋತ್ಸವ, ಪುನರ್ಪ್ರತಿಷ್ಠೆಯ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ದ್ವೇಷ ಅಸೂಯೆಗಳನ್ನು ದೂರೀಕರಿಸಿ, ಶಾಂತಿಯನ್ನು ಪ್ರತಿಪಾದಿಸುವಲ್ಲಿ ದೇವಳದ ಪಾತ್ರ ಅನನ್ಯ. ಪೂರ್ವಜರು ಸಮಾಜದಲ್ಲಿ ಸಾಮರಸ್ಯದೊಂದಿಗೆ ಸಹಬಾಳ್ವೆ, ಪರಸ್ಪರ ಒಬ್ಬರನ್ನೊಬ್ಬರು ಅರಿತು ಪ್ರೀತಿ ಮತ್ತು ವಿಶ್ವಾಸದಿಂದ ಬದುಕಲು ದೇವಳಗಳ ಪರಿಕಲ್ಪನೆಯನ್ನು ಸಾರಿದ್ದಾರೆ. ಅದನ್ನು ಉಳಿಸಿ-ಬೆಳೆಸಿ ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗೆಯೂ ಮುನ್ನಡೆಸಿಕೊಂಡು ಹೋಗುವ ಚೈತನ್ಯ ತುಂಬುವ ಕೆಲಸವನ್ನು ಮಾಡಬೇಕಾಗಿದೆ. ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗುವುದರಿಂದ ನಮ್ಮ ಮಾನವ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದರು.
ಉಡುಪಿಯ ಅಂಬಲಪಾಡಿ ಮಹಾಕಾಳಿ ದೇವಳದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಡಿವೈಎಸ್ಪಿ ವಿನಯ ನಾಯಕ್, ಪುರಸಭೆ ಸದಸ್ಯ ಸೀತಾರಾಮ ದೇವಾಡಿಗ, ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಸಿದ್ಧಿವಿನಾಯಕ ದೇವಳದ ಆಡಳಿತ ಮೊಕ್ತೇಸರ ವಿಘ್ನೇಶ್ ಪಾಠಕ್, ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಳದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ, ಉದ್ಯಮಿ ಅಂಡಾರು ರಾಮದಾಸ ಕಿಣಿ, ಗುತ್ತಿಗೆದಾರ ಸುಜಯ ಶೆಟ್ಟಿ, ಮಹಾಗಣಪತಿ ಸ್ಟೋನ್ ಕ್ರಷರ್ನ ದಿನೇಶ್ ಶೆಟ್ಟಿ, ದೇವಳದ ಆಡಳಿತ ಮೊಕ್ತೇಸರ ರಾಧಾಕೃಷ್ಣ ಶೆಟ್ಟಿ, ಮೊಕ್ತೇಸರರಾದ ಹರಿಕೃಷ್ಣ ಭಟ್, ಕೆ.ಅನಂತಕೃಷ್ಣ ಶೆಟ್ಟಿ, ಸದಾನಂದ ಗುತ್ತಬೈಲು, ರೋಹಿತಾಕ್ಷ ಶೆಟ್ಟಿ, ಚಂದ್ರಹಾಸ ಸುವರ್ಣ, ಕೆ.ಪಿ.ಶಿವಾನಂದ, ಕೆ.ರಾಜಲಕ್ಷ್ಮೀ ರಾವ್, ಪೂರ್ಣಿಮಾ ಅಶೋಕ್ ಕೋಟ್ಯಾನ್, ಪ್ರಭಾಕರ ಬಂಗೇರ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಬೆಳಿರಾಯ, ಸಂಚಾಲಕ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ವಿಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಾಣೂರು ಮೋಹನ್ದಾಸ್ ಪ್ರಭು ಮತ್ತು ಬೇಬಿ ಡಿ.ಆಳ್ವ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.