ಮಂಗಳೂರು : ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಪರ್ಕ್ ಹೈ ಸ್ಪೀಡ್ ನೆಟ್, ಡಿವೈನ್ ವರ್ಡ್ ಮತ್ತು ಬಿಗ್ ಜೆ ಇವರ ಆಶ್ರಯದಲ್ಲಿ “ಸರ್ವಧರ್ಮ ಕ್ರಿಸ್ಮಸ್ ಆಚರಣೆ-2015” ಡಿಸೆಂಬರ್ 20, ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ ಸಾಯಾಂಕಾಲ 4-30 ರಿಂದ 10-30 ತನಕ ನೆರವೇರಲಿದೆ.
ಇದೇ ಸಂದರ್ಭದಲ್ಲಿ ಮಂಗಳೂರು ನಗರ ಪೋಲಿಸ್, ಮಹಿಳಾ ಪೋಲಿಸ್ ಠಾಣೆ ಪಾಂಡೇಶ್ವರ್, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸಂತ ಲಾರೆನ್ಸ್ ಇಂಡಿಯನ್ ಸ್ಕೂಲ್ ಕಿನ್ನಿಗೋಳಿ ಇವರಿಂದ ಜಂಟಿಯಾಗಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ವಿರುದ್ಧ ಕಿರುನಾಟಕವು ಸಂಜೆ 4-30 ರಿಂದ 5-30 ರವರೆಗೆ ನಡೆಯಲಿದೆ. ತದನಂತರ ಪ್ರಖ್ಯಾತ ತಂಡಗಳಾದ ಬಾಯ್ಸ್ಜೋನ್ ಡ್ಯಾನ್ಸ್ ಅಕಾಡೆಮಿ, ಸಂತ ಲಾರೆನ್ಸ್ ಇಂಡಿಯನ್ ಸ್ಕೂಲ್, ಸಿಜ್ಲಿಂಗ್ ಗಯ್ಸ್ ಡ್ಯಾನ್ಸ್ ಸ್ಟುಡಿಯೋ, ಡಿವೈನ್ ವರ್ಡ್ ಟಿವಿ ಕ್ರ್ಯೂ, ಥಂಡರ್ ಗಯ್ಸ್ ಬಜಪೆ, ಬಿಗ್ ಜೆ ಇವರಿಂದ ವಿವಿಧ ರಾಷ್ಟ್ರೀಯ ಮಟ್ಟದ ಡ್ಯಾನ್ಸ್ ಮತ್ತು ಕ್ರಿಸ್ಮಸ್ ಕಾರ್ಯಕ್ರಮಗಳು ನಡೆಯಲಿವೆ.
ಮಂಗಳೂರು ಬಿಷಪ್ ರೆ| ಫಾ| ಡಾ. ಅಲೋಶಿಯಸ್ ಪೌಲ್ ಡಿಸೋಜ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು ಕ್ರಿಸ್ಮಸ್ ಸಂದೇಶವನ್ನು ನೀಡಲಿದ್ದಾರೆ. ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ, ಹಾಗೂ ರಾಜ್ಯ ಅರಣ್ಯ ಸಚಿವರಾದ ಬಿ ರಮನಾಥ್ ರೈ ಅವರು ಉದ್ಘಾಟಿಸಲಿರುವರು. ಈ ಸಂಧರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಓಸ್ಕಾರ್ ಫೆರ್ನಾಂಡಿಸ್ ಅವರು ಕ್ರಿಸ್ಮಮಸ್ ಕೇಕ್ ಕತ್ತರಿಸಿ ಹಬ್ಬದ ವಿದ್ಯುಕ್ತ ಆಚರಣೆಯನ್ನು ನಡೆಸಲಿರುವರು.
ರಾಜ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಅಂಗವಿಕಲರಿಗೆ ಉಪಕರಣಗಳನ್ನು ವಿತರಿಸಲಿರುವರು. ರಾಜ್ಯ ಮೀನುಗಾರಿಕಾ ಸಚಿವರಾದ ಅಭಯಚಂದ್ರ ಜೈನ್ ಅವರು ಕ್ರಿಸ್ಮಮಸ್ ಸಂದೇಶವನ್ನು ನೀಡಲಿರುವರು. ಕಾರ್ಯಕ್ರಮದಲ್ಲಿ ಮಂಗಳೂರಿನ ಮೇಯರ್ ಜೆಸಿಂತಾ ವಿಜಯ್ ಆಲ್ಫ್ರೆಡ್ ಅವರು ಡಿವೈನ್ ವರ್ಡ್ ಚಾನೆಲ್ ಸಿಬ್ಬಂದಿಗಳನ್ನು ಸನ್ಮಾನಿಸಲಿರುವರು. ದಕ್ಷಿಣ ಕನ್ನಡ ಜಿಲ್ಲಾ ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಭೆಗಳನ್ನು ಗೌರವಿಸಲಿರುವರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಭಾಗದ ಶಾಸಕರಾದ ಜೆ.ಆರ್. ಲೋಬೋ, ಮಂಗಳೂರು ಉತ್ತರ ವಿಭಾಗದ ಶಾಸಕರಾದ ಮೊಯ್ದೀನ್ ಬಾವಾ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಸಂಪರ್ಕ್ ಇನ್ಫೋಟೈನ್ಮೆಂಟ್ನ ಅಧ್ಯಕ್ಷರಾದ ಪ್ರಕಾಶ್ ಡಿಸೋಜ, ಮಂಗಳೂರು ಅಭಿವ್ರದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಇಬ್ರಾಹಿಂ ಕೊಡಿಜಾಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್ ಡಿಸೋಜ, ಬಿಗ್ ಜೆ ಚಾನಲ್ ಸದಸ್ಯರಾದ ಪ್ರಶಾಂತ್ ಅವರು ಉಪಸ್ತಿತರಿರುವರು.
ಈ ಕ್ರಿಸ್ಮಸ್ ಕಾರ್ಯಕ್ರಮವನ್ನು ಸರ್ವಧರ್ಮದವರೊಂದಿಗೆ ಸೇರಿ ಆಚರಿಸಿ ಸಮಾಜಕ್ಕೆ ಪ್ರೀತಿ, ಶಾಂತಿ, ಸೌಹಾರ್ದತೆಯ ಸಂದೇಶವನ್ನು ನೀಡುವ ಉದ್ದೇಶದೊಂದಿಗೆ ಹಮ್ಮಿಕೊಂಡಿದ್ದು ಇದರೊಂದಿಗೆ 10 ಬಡ ಅಂಗವಿಕಲರಿಗೆ ವೀಲ್ಡ್ ಚಯರನ್ನು ಸಹ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವತಿಯಿಂದ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ಆಯೋಜಕರಾದ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರಾದ ಶ್ರೀ ವಾಲ್ಟರ್ ಸ್ಟೀಫನ್ ಮೆಂಡಿಸ್ ಕೇಳಿಕೊಂಡಿರುತ್ತಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.