ಉಡುಪಿ: ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ 2015 ನೇ ಸಾಲಿನ ಜಿಲ್ಲಾ ಪೊಲೀಸರ ಕ್ರೀಡಾಕೂಟ ಉದ್ಘಾಟನೆಗೊಂಡಿದೆ. 3 ದಿನಗಳ (ಡಿ. 16 ರಿಂದ 18) ಪೊಲೀಸರ ಕ್ರೀಡಾಕೂಟವನ್ನು ಮಣಿಪಾಲ ವಿವಿ ಉಪಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಬಲೂನು ಹಾರಿ ಬಿಡುವ ಹಾಗೂ ಶಾಂತಿಯ ಸಂಕೇತವಾಗಿ ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೊಲೀಸರು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಈ ಹಿನ್ನಲೆಯಲ್ಲಿ ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಪೊಲೀಸರು ನಿದ್ದೆಕೆಟ್ಟು ಕೆಲಸ ಮಾಡುವುದರಿಂದ ನಾವು ಸುಖ ನಿದ್ದೆ ಮಾಡಲು ಸಾದ್ಯವಾಗಿದೆ. ವರ್ಷಪೂರ್ತಿ ಪೊಲೀಸರು ತಮ್ಮ ಕೆಲಸದ ಒತ್ತಡದಲ್ಲಿರುತ್ತಾರೆ ಈ ದಿನ ಎಲ್ಲಾ ಒತ್ತಡವನ್ನು ಮರೆತು ಪೊಲೀಸರು ಕ್ರೀಡಾ ಸ್ಫೂರ್ತಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಎಸ್ಪಿ ಅಣ್ಣಾ ಮಲೈ ಮಾತನಾಡಿ ಬೆಂಗಳೂರು ನಗರ ಬಿಟ್ಟರೆ ಉಡುಪಿಯ ಪೊಲೀಸ್ ತಂಡ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಯನ್ನು ಹೊಂದಿದೆ. ನಮ್ಮಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ಈ ಮೂರು ದಿನದಲ್ಲಿ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಮತ್ತು ಯಶಸ್ಸುಗೊಳಿಸಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಎ.ಎಸ್ಪಿ ಸಂತೋಷ್ ಕುಮಾರ್, ಎ.ಎಸ್ಪಿ ಸುಮನ್ ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ಕ್ರೀಡಾಳುಗಳಿಂದ ಪಥಸಂಚಲನ ನಡೆಯಿತು. ಮೂರು ದಿನಗಳಲ್ಲಿ 27 ವಿಧದ ಕ್ರೀಡಾಕೂಟಗಳು ನಡೆಯಲಿದ್ದು ಈ ಕ್ರೀಡಾಕೂಟದಲ್ಲಿ 2,200 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.