ಬೆಳ್ತಂಗಡಿ : ಕರ್ನಾಟಕದ ಪುಣ್ಯಕ್ಷೇತ್ರ ಶ್ರೀ ಧರ್ಮಸ್ಥಳದಲ್ಲಿ ಕಾರ್ತಿಕ ದೀಪೋತ್ಸವದ ಸಂಭ್ರಮ 4 ನೇ ದಿನಕ್ಕೆ ಮುಂದುವರಿದಿದೆ. ನಾಳೆ ಬುಧವಾರ 83ನೇ ಸರ್ವಧರ್ಮ ಅಧಿವೇಶನ ಸಂಪನ್ನಗೊಳ್ಳಲಿದೆ. ಲಕ್ಷದೀಪೋತ್ಸವದ ಮೂರನೇ ದಿನವಾದ ಮಂಗಳವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ-ನೃತ್ಯಗಳನ್ನೊಳಗೊಂಡ ಲಲಿತಕಲಾ ಗೋಷ್ಠಿ ನಡೆಯಿತು. ಮೊದಲಿಗೆ ಸೈಯದ್ ಸಲ್ಲಾವುದ್ದೀನ್ ಪಾಷಾ ನಿರ್ದೇಶನದ ಎಬಿಲಿಟಿ ಅನ್ಲಿಮಿಟೆಡ್ ಫೌಂಡೇಶನ್ದೆಹಲಿ ಅವರ ವಿಕಲಚೇತನರ ಸಾಹಸ ನೃತ್ಯ ಪ್ರದರ್ಶನ ಮಿರಾಕಲ್ಆನ್ ವೀಲ್ಸ್ ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಬಳಿಕ ಬೆಂಗಳೂರಿನ ಪ್ರಿಯದರ್ಶಿನಿ ವಾಸುದೇವ್ ಹಾಗು ಮೇಘನಾ ವಾಸುದೇವ್ ಅವರ ಭರತನೃತ್ಯ ಶ್ರೋತೃಗಳನ್ನು ಆಕರ್ಷಿಸಿತು.ನಂತರ ನಡೆದ ಶ್ರೀಧರ ಸಿ.ಜೆ. ನಿರ್ದೇಶನದಲ್ಲಿ ಸಾಗರದ ಉದಯ ಕಲಾವಿದರು ಪ್ರದರ್ಶಿಸಿದ ಸುಂದ್ರೋಪ ಸುಂದ್ರು ಎಂಬ ಹಾಸ್ಯ ನಾಟಕ ನೆರೆದವರನ್ನು ನಗೆಗಡಲಲ್ಲಿ ತೇಲಿಸಿತು. ಕೊನೆಯಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಅವರಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಗೊಂಡಿತು.
ಅದೇರೀತಿ ವಸ್ತುಪ್ರದರ್ಶನ ಮಂಟಪದಲ್ಲಿ ಮೈಸೂರಿನ ವಿದ್ವಾನ್ ಕೆ.ಗುರುಪ್ರಸಾದ್ ಮತ್ತು ತಂಡದವರಿಂದ ನಡೆದ ಭಕ್ತಿ ಸಂಗಿತ ಶ್ರೋತ್ರಗಳಲ್ಲಿ ಭಕ್ತಿಭಾವವನ್ನು ಉದ್ದೀಪನಗೊಳಿಸಿತು. ಬಳಿಕ ನಡೆದ ಪುತ್ತೂರು ಶ್ರೀ ದೇವಿ ನೃತ್ಯರಾಧನ ಕಲಾಕೇಂದ್ರದ ರೋಹಿಣಿ ಉದಯ್ ಹಾಗೂ ಶಿಷ್ಯೆಯರಿಂದ ನಡೆದ ಭರತನಾಟ್ಯ ಹಾಗೂ ಜನಪದ ನೃತ್ಯ ಪ್ರೇಕ್ಷಕರನ್ನು ರಂಜಿಸಿತು.
ನಾಳೆ ಸರ್ವಧರ್ಮ ಸಮ್ಮೇಳನ : ಕ್ಷೇತ್ರದಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5 ಗಂಟೆಯಿಂದ ಹರಿದ್ವಾರ ವಿಶ್ವಗಾಯತ್ರಿ ಪರಿವಾರದ ಮುಖ್ಯಸ್ಥ ಡಾ| ಪ್ರಣವ್ ಪಾಂಡ್ಯ ಅವರ ಅಧ್ಯಕ್ಷತೆಯಲ್ಲಿ ೮೩ ನೇ ಸರ್ವಧರ್ಮ ಸಮ್ಮೇಳನ ನಾಳೆ ನಡೆಯಲಿದೆ.
ಸಮ್ಮೇಳನವನ್ನು ರಾಜ್ಯ ಸಹಕಾರಿ ಸಚಿವ ಹೆಚ್.ಎಸ್.ಮಹಾದೇವ ಪ್ರಸಾದ್ ಉದ್ಘಾಟಿಸಲಿದ್ದಾರೆ. ಬೆಂಗಳೂರು ಪಾರ್ಸಿ ಜೊರಾಸ್ಟ್ರೀಯನ್ ಅಂಜುಮಾನ್ ಕಾರ್ಯದರ್ಶಿ, ಆಡಳಿತಾತ್ಮಕ ಸಲಹೆಗಾರ ಶೆರಿಯಾರ್ ಡಿ. ವಕೀಲ್, ಚೆನ್ನೈನ ಮದ್ರಾಸ್ ವಿ.ವಿ. ಕನ್ನಡ ವಿಭಾಗ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ತಮಿಳ್ ಸೆಲ್ವಿ ಹಾಗೂ ಹಾಸನದ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ| ಸೈಯದ್ ಶಹಾಬುದ್ದೀನ್ ಉಪನ್ಯಾಸಗಳನ್ನು ನೀಡಲಿದ್ದಾರೆ. ಬಳಿಕ ಚೆನ್ನೈ ವಿದ್ವಾನ್ ಗುಣೇಶ್-ಕುಮರೇಶ್ ಸಹೋದರರಿಂದ ವಯಲಿನ್ ವಾದನ ಪ್ರಸ್ತುತಗೊಳ್ಳಲಿದೆ.
ಅದೇ ರೀತಿ ವಸ್ತುಪ್ರದರ್ಶನ ಮಂಟಪದಲ್ಲಿ ಇಂದು ಸಂಜೆ 7 ಗಂಟೆಯಿಂದ ಬೆಂಗಳೂರಿನ ವಿದುಷಿ ಅಂಜಲಿ ಸುಧೀರ್ ಮತ್ತು ಬಳಗದವರಿಂದ ಲಘು ಶಾಸ್ತ್ರೀಯ ಸಂಗೀತ ಬಳಿಕ ಡಾ|ಸುಮನ್ ರಂಜಾಳ್ಕರ್ ಮತ್ತು ತಂಡದವರಿಂದ ಭರತ ನೃತ್ಯ ನಂತರ ಮಂದಾರ್ತಿ ತಂತ್ರಾಡಿ ಮಕ್ಕಳ ಮೇಳದವರಿಂದ ಶ್ರೀಕೃಷ್ಣಾಶ್ವಮೇಧ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಗುರುವಾರ ಸಾಹಿತ್ಯ ಸಮ್ಮೇಳನದ 83 ನೇ ಅಧಿವೇಶನ ಸಂಪನ್ನಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.