ಬೆಳ್ತಂಗಡಿ : ಸ್ವಸ್ಥ ಸಮಾಜದ ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಸಮಿತಿಯು ಭಾನುವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ಯಶಸ್ವೀ ಪಾದಯಾತ್ರೆಯನ್ನು ನಡೆಸಿತು.
ಸಂಜೆ ಉಜಿರೆ ಶ್ರೀ ಜನಾರ್ದನಸ್ವಾಮೀ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ 3 ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಬಾರಿ ಪಾದಯಾತ್ರೆಯಲ್ಲಿ ಮಹಿಳೆಯರೂ ಸೇರಿದಂತೆ ಮಕ್ಕಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿವಿಧ ಭಜನಾ ಮಂಡಳಿಗಳ ಸದಸ್ಯರು, ಯುವಕ, ಯುವತಿ ಮಂಡಲದ ಸದಸ್ಯರುಗಳು ಪಾಲ್ಗೊಂಡರು.
4 ಮಂಜುನಾಥ ಸ್ವಾಮಿ ಭಾವಚಿತ್ರವಿರುವ ರಥವನ್ನು ಸಿಂಗರಿಸಿ ನಡೆಸಲಾಯಿತು. ನೀರಚಿಲುಮೆ, ಕನ್ಯಾಡಿಯಲ್ಲಿ ಭಾಗವಹಿಸಿದ ಭಕ್ತರಿಗೆ ಪಾನೀಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರು ಪಾದಯಾತ್ರೆಯದ್ದಕ್ಕೂ ಭಜನೆ ಹಾಡುತ್ತ ಸಾಗಿದರು. ಈ ಸಂದರ್ಭ ಮಡಂತ್ಯಾರಿನಿಂದ ಉಜಿರೆ ತನಕ ನೂರು ಸಂಖ್ಯೆಯಲ್ಲಿ ಬೈಕ್ರ್ಯಾಲಿ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.