×
Home About Us Advertise With s Contact Us

ಭಾರತದಲ್ಲಿ ಪಾಕ್ ಸಿಗ್ನಲ್!

signalಜೈಪುರ್: ರಾಜಸ್ಥಾನದಲ್ಲಿನ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಸುಮಾರು ೨೦ ಕಿಲೋ ಮೀಟರ್ ಭಾರತದ ವ್ಯಾಪ್ತಿಯೊಳಗೆ ಪಾಕಿಸ್ಥಾನದ ಮೊಬೈಲ್ ಸಿಗ್ನಲ್‌ಗಳು ದೊರೆಯುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಬೇಹುಗಾರರು ಮತ್ತು ಕಳ್ಳ ಸಾಗಾಣೆದಾರರು ಇದೇ ಸಿಗ್ನಲ್‌ಗಳನ್ನು ಬಳಸುತ್ತಿದ್ದಾರೆ ಮತ್ತು ಪಾಕ್‌ನ ಸಿಮ್ ಕಾರ್ಡ್‌ಗಳನ್ನು ಬಳಸಿ ಕಾನ್ಫಿಡೆನಿಶಿಯಲ್ ಮಾಹಿತಿಗಳನ್ನು ಪಾಕ್‌ಗೆ ರವಾನಿಸುತ್ತಿದ್ದಾರೆ ಎಂಬ ಭಯಾನಕ ಮಾಹಿತಿಗಳು ಲಭ್ಯವಾಗಿವೆ.

ಅಂತಾರಾಷ್ಟ್ರೀಯ ಟೆಲಿಕಾಂ ಸೆಕ್ಟರ್ ನಿಯಮಾವಳಿಯ ಪ್ರಕಾರ ಒಂದು ದೇಶದ ಮೊಬೈಲ್ ಸಿಗ್ನಲ್ ಇನ್ನೊಂದು ದೇಶದ ಗಡಿಯ ಕೇವಲ 500 ಮೀಟರ್ ದೂರದವರೆಗೆ ಮಾತ್ರ ಹೋಗಬಹುದು.

ಆದರೆ ಪಾಕಿಸ್ಥಾನ ಈ ನಿಯಮವನ್ನು ಉಲ್ಲಂಘಿಸುತ್ತಿದೆ. ಇದರಿಂದ ಭಾರತದ ಭದ್ರತೆಗೆ ಆತಂಕ ಉಂಟಾಗಿದೆ.

 

Recent News

Back To Top
error: Content is protected !!