ನವದೆಹಲಿ: ರಿಸರ್ವೇಶನ್ ಮಾಡಿ ಪ್ರಯಾಣಿಸುವ 5 ವರ್ಷ ಮೇಲ್ಪಟ್ಟ ಮಕ್ಕಳಿಗೂ ಇನ್ಮುಂದೆ ಫುಲ್ ಟಿಕೆಟ್ ಖರೀದಿಸಬೇಕು.
ಭಾರತೀಯ ರೈಲ್ವೆ ಇಲಾಖೆಯು ಮಕ್ಕಳ ಪ್ರಯಾಣ ಶುಲ್ಕ ನಿಯಮವನ್ನು ಪರಿಷ್ಕರಿಸಿದ್ದು, ರೈಲು ಪ್ರಯಾಣ ಸಮಯದಲ್ಲಿ ಮೊದಲೇ ಟಿಕೆಟ್ ಖಾಯ್ದಿರಿಸಿದರೆ ವಯಸ್ಕರ ಟಿಕೆಟ್ಗೆ ಎಷ್ಟು ಹಣ ಪಾವತಿಸಬೇಕೋ ಅಷ್ಟೇ ಹಣವನ್ನು 5 ರಿಂದ 12 ವರ್ಷ ವಯಸ್ಸಿನ ಮಕ್ಕಳ ಟಿಕೆಟ್ಗೂ ಪಾವತಿಸಬೇಕು.
ಈ ಮೊದಲು 5-12 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಶುಲ್ಕವನ್ನು ಪಾವತಿಸಿದರೆ ಸಾಕಾಗಿತ್ತು. ರೈಲ್ವೆಯು ಮಕ್ಕಳ ಪ್ರಯಾಣ ಶುಲ್ಕ ನಿಯಮಾವಳಿಗಳನ್ನು ಪರಿಷ್ಕರಿಸಿದ ಕಾರಣ 5-12 ವಯಸ್ಸಿನ ಮಕ್ಕಳಿಗೂ ಫುಲ್ ಟಿಕೆಟ್ ಹಣ ಪಾವತಿಸಬೇಕು. ಟಿಕೆಟ್ ಕಾಯ್ದಿರಿಸುವ ಸಂದರ್ಭ ಮಕ್ಕಳಿಗೆ ಯಾವ ಸೀಟ್ / ಬರ್ಥ್ ಎಂದು ನಮೂದಿಸಬೇಕೆಂದಿಲ್ಲ ಎನ್ನಲಾಗಿದೆ.
ರಿಸರ್ವೇಶನ್ ಇಲ್ಲದ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುವ 5-12 ವಯಸ್ಸಿನ ಮಕ್ಕಳಿಗೆ ಹಾಫ್ ಟಿಕೆಟ್ ಸೌಲಭ್ಯ ಹಾಗೇ ಮುಂದುವರಿಯಲಿದೆ.
2016 ರ ಏಪ್ರಿಲ್ನಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಿಖರ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.