ಬಂಟ್ವಾಳ : ನರಿಕೊಂಬು ಗ್ರಾಮದ ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಿಸಿದ ಜಮೀನು ಮರು ಸರ್ವೇ ತಯಾರಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಸುಭಾಶ್ ಅಡಿ ಅವರು ಮಂಗಳೂರು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಆದೇಶಿಸಿದ್ದಾರೆ.
ಜಮೀನಿನ ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ತಯಾರಿಸಲಾದ ನಕ್ಷೆಗೆ ಆಕ್ಷೇಪ ಸಲ್ಲಿಸಿದ್ದರಿಂದ ಪ್ರಕರಣವನ್ನು ಖುದ್ಧು ಪರಿಶೀಲಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಸಹಾಯಕ ಕಮಿಷನರ್ ಡಾ. ಅಶೋಕ್ ಅವರಿಗೆ ಆದೇಶಿಸಿದ್ದಾರೆ.
ನರಿಕೊಂಬು ಗ್ರಾಮದ ಸರ್ವೇ ನಂಬ್ರ 50/1ಎರಲ್ಲಿ 1.49 ಎಕರೆ ಹಾಗೂ 52/1ಎ1ಪಿರಲ್ಲಿ 2 ಎಕರೆ ಜಮೀನಿನ ಮೂಲ ನಕ್ಷೆಯನ್ನು ಆಧರಿಸಿ, ವಾಸ್ತವಾಂಶದ ಕುರಿತು ಸರ್ವೇ ಕಾರ್ಯ ನಡೆಸಿ, ಅತಿಕ್ರಮಣವನ್ನು ಗುರುತಿಸಿ ವರದಿ ಸಲ್ಲಿಸುವಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸಹಾಯಕ ಕಮಿಷನರ್ ಸೂಚಿಸಿದ್ದಾರೆ. ಪ್ರಕರಣವನ್ನು ಅತಿ ಜರೂರಾಗಿ ಪರಿಗಣಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.