×
Home About Us Advertise With s Contact Us

ಬಿಹಾರ ಸಾಮೂಹಿಕ ನಕಲು: 750 ವಿದ್ಯಾರ್ಥಿಗಳು ಡಿಬಾರ್

examಪಾಟ್ನಾ; ಬಿಹಾರದ ಬೋರ್ಡ್ ಎಕ್ಸಾಂನಲ್ಲಿ ನಡೆದ ಸಾಮೂಹಿಕ ನಕಲಿನ ದೃಶ್ಯಗಳು ಇಡೀ ದೇಶವನ್ನು ದಿಗ್ಭ್ರಾಂತಗೊಳಿಸಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ ಚೀಟಿಂಗ್ ರಾಕೆಟ್‌ನಲ್ಲಿ ತೊಡಗಿದ್ದ 750 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದೆ. ಅಲ್ಲದೇ 8 ಪೊಲೀಸರನ್ನು ಬಂಧಿಸಿದೆ.

ಶಾಲೆಯ ಬಹು ಮಹಡಿ ಕಟ್ಟಡವನ್ನು ಹತ್ತಿ ಪರೀಕ್ಷೆ ಬರೆಯುತ್ತಿರುವ ತಮ್ಮ ಮಕ್ಕಳಿಗೆ ನೂರಾರು ಪೋಷಕರು ಚೀಟಿ ರವಾನಿಸುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದು ಬಿಹಾರ ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡಿತ್ತು. ಅಲ್ಲದೇ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಪ್ರಕರಣದಲ್ಲಿ ಹಲವು ಪೋಷಕರನ್ನೂ ಬಂಧಿಸಲಾಗಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಬಿಹಾರದ 1,217 ಸೆಂಟರ್‌ಗಳಲ್ಲಿ ಒಟ್ಟು 14.26ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

 

Recent News

Pungava 01-10-2018
23 hours ago  
Back To Top
error: Content is protected !!