ಬೆಳ್ತಂಗಡಿ : ಭಾರತೀಯ ಸಂಸ್ಕೃತಿ, ಸನಾತನಧರ್ಮ, ಕಲೆಯ ರಾಯಭಾರಿಯಾಗಿ ಕಳೆದ 7 ವರ್ಷಗಳಿಂದ ಭಾರತವಲ್ಲದೇ ವಿಶ್ವಕ್ಕೆ ತನ್ನ ಸಿರಿಯನ್ನು ಶ್ರೀ ಶಂಕರ ಟಿವಿ ಪಸರಿಸಿದೆ. ವೇದ, ಉಪನಿಷತ್, ಸಂಸ್ಕೃತಿ-ಸಂಸ್ಕಾರ, ಭಕ್ತಿ-ಚೈತನ್ಯದ ಪ್ರತೀಕವಾದ ಶ್ರೀ ಶಂಕರ ಕೆಲವೇ ಕೆಲವು ದಿನಗಳಲ್ಲಿ ಮನಸೊರೆಗೊಂಡಿದೆ. 78 ದೇಶಗಳಲ್ಲಿ ಪ್ರಸಾರಗೊಂಡು ಧಾರ್ಮಿಕ ಚಿಂತಕರ ದಾಹವನ್ನು ನೀಗಿಸುವಲ್ಲಿ ಯಶಸ್ವಿಯಾಗಿದೆ. ದೇಗುಲ ದರ್ಶನ, ವೇದ-ಉಪನಿಷತ್ಗಳ ಸಾರ, ಕಲೆ-ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಶೇಷ ವಿನೂತನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.
ಪ್ರಸ್ತುತ ಶ್ರೀ ಶಂಕರಟಿವಿಯು ಕಳೆದ ಹಲವಾರು ವರ್ಷದಿಂದ ಭಜನ್ ಸಾಮ್ರಾಟ್ ಎಂಬ ರಿಯಾಲಿಟಿ ಷೋಗಳನ್ನು ನಡೆಸಿಕೊಂಡು ಬರುತ್ತಿದೆ. ಈಗಾಗಲೇ ಭಜನ್ ಸಾಮ್ರಾಟ್ ಸೀಸನ್ 1,2,3 ಮತ್ತು ಭಜನ್ ಸಾಮ್ರಾಟ್ ಜೂನಿಯರ್-1 ರಿಯಾಲಿಟಿ ಷೋಗಳನ್ನು ಯಶಸ್ವಿಯಾಗಿ ನಡೆಸಿಕೊಡಲಾಗಿದ್ದು, ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದೆ.
ಈ ವರ್ಷ ಭಜನ್ ಸಾಮ್ರಾಟ್ ಸೀಸನ್-4, ಭಜನ್ ಸಾಮ್ರಾಟ್ ಜೂನಿಯರ್-2, ರ ಆಡಿಷನ್ ಕಾರ್ಯಕ್ರಮವನ್ನು ನವೆಂಬರ್ 28 ಮತ್ತು 29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ್ ಮಹಲ್ ನಲ್ಲಿ ಆಯೋಜಿಸಲಾಗಿದೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ನವೆಂಬರ್ 28 ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮಂಗಳೂರು, ಉಡುಪಿ, ಕಾಸರಗೋಡು ಮುಂತಾದ ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳ ಭಜನಾ ತಂಡಗಳು ಈ ಅರ್ಹತಾ ಸುತ್ತಿನ (ಆಡಿಷನ್ಸ್) ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿರುತ್ತದೆ.
ಸ್ಫರ್ಧಿಸಲು ಇಚ್ಛಿಸುವ ಭಜನಾ ತಂಡಗಳು ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಬಹುದು. ಕೃಷ್ಣಮೂರ್ತಿ, ಶ್ರೀ ಶಂಕರ ಟಿ.ವಿ., ಬೆಂಗಳೂರು, ಮೊಬೈಲ್ ಸಂಖ್ಯೆ – 9632200815, ಬಿ. ಜಯರಾಮ ನೆಲ್ಲಿತ್ತಾಯ, ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಶ್ರೀ ಕ್ಷೇತ್ರ ಧರ್ಮಸ್ಥಳ ಮೊಬೈಲ್ ಸಂಖ್ಯೆ – 9448622805.
ಭಜನಾ ಸಾಮ್ರಾಟ್ಕಾರ್ಯಕ್ರಮದ ವಿವರ : ನ. 28 ರಂದು ಬೆಳಗ್ಗೆ 9-00 ಗಂಟೆಯಿಂದ ಸಂಜೆ 7 ಗಂಟೆ ತನಕ ಹಾಗೂ ನ. 29 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 7 ತನಕ ಭಜನಾ ಸಾಮ್ರಾಟ್ ಸ್ಫರ್ಧೆ ನಡೆಯಲಿದೆ.ಜೂನಿಯರ್ ವಿಭಾಗ 8 ವರ್ಷದಿಂದ 17ವರ್ಷದೊಳಗೆ ಇರಬೇಕು.ಸಿನಿಯರ್ ವಿಭಾಗ 17 ವರ್ಷದಿಂದ 45 ವರ್ಷದೊಳಗೆ ಇರಬೇಕು.ಭಾಗವಹಿಸುವ ಸಮಯದಲ್ಲಿ ಸ್ಫರ್ಧಿಗಳು ತಮ್ಮ ಪೋಟೋ, ವಯಸ್ಸು ಹಾಗೂ ವಿಳಾಸದ ದಾಖಲಾತಿಗಳನ್ನು ಸಲ್ಲಿಸಬೇಕು.ತಂಡದಲ್ಲಿ ವಾದ್ಯಕಲಾವಿದರನ್ನು ಒಳಗೊಂಡು 7 ರಿಂದ 9 ಸ್ಪರ್ಧಿಗಳು ಇರಬೇಕು.ಭಾಗವಹಿಸುವ ಸಮಯದಲ್ಲಿಆಯ್ಕೆಯಾದ ಹಾಡುಗಾರರೆ ಮುಂದಿನ ಸುತ್ತುಗಳಲ್ಲಿ ಹಾಡಬೇಕು. ಯಾವುದೇಕಾರಣಕ್ಕೂ ಹಾಡುಗಾರರು ಬದಲಾಗಬಾರದು.
ಹಿನಿ ಆಯ್ಕೆ ಮಾಡಿದ ಮುಂದಿನ ಶೂಟಿಂಗ್ ದಿನಾಂಕಗಳಿಗೆ ಎಲ್ಲಾ ತಂಡದವರು ಬದ್ಧರಾಗಿರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಎಲ್ಲಾ ಸ್ಪರ್ಧಿಗಳು ಅದಕ್ಕೆ ಬದ್ಧರಾಗಿರಬೇಕು. ಸ್ಫರ್ಧಿಗಳ ಪ್ರದರ್ಶನದ ಬಗ್ಗೆ ತೀರ್ಮಾನಿಸಲು ವಾಹಿನಿಗೆ ಪರಿಪೂರ್ಣ ಹಕ್ಕು ಇರುತ್ತದೆ. ವಾಹಿನಿಯ ಕಾರ್ಯಕ್ರಮದ ಸಂಪೂರ್ಣ ಹಕ್ಕು ಸ್ವಾಮ್ಯಗಳನ್ನು ಹೊಂದಿರುತ್ತದೆ.ಪೂರ್ವ ಪರೀಕ್ಷೆಯ ಪ್ರಯಾಣದ ಖರ್ಚು ವೆಚ್ಚಗಳನ್ನು ಸ್ಪರ್ಧಿಗಳೇ ನಿಭಾಯಿಸಬೇಕು. ಯಾವುದೇ ಹಂತದಲ್ಲೂ ಶಿಫಾರಸ್ಸು ಮಾಡಬಾರದು. ಸ್ಪರ್ಧಿಗಳು ತೀರ್ಪುಗಾರರ ಬಳಿ ಮಾತನಾಡಬಾರದು ಹಾಗೂ ಪ್ರಭಾವಿಸಬಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.