ನವದೆಹಲಿ : ಇಸಿಸ್ ಉಗ್ರರು ಭಾರತದಲ್ಲೂ ದಾಳಿ ನಡೆಸಬಹುದು ಎಂಬ ಬೇಹುಗಾರಿಕಾ ಮೂಲಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಗೃಹಸಚಿವ ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ.
ಇಸಿಸ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಬೆದರಿಕೆಯಲ್ಲ. ಇದು ಇಡೀ ವಿಶ್ವಕ್ಕೇ ಸವಾಲು. ಇಸಿಸ್ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಉಗ್ರರನ್ನು ದಮನ ಮಾಡಬೇಕು ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಪ್ಯಾರಿಸ್ ದಾಳಿ ನಂತರ, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಉಗ್ರರ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ. ಉಗ್ರರು ಸೇಡು ತೀರಿಸಿಕೊಳ್ಳಲು ಯಾವುದೇ ದೇಶದಲ್ಲೂ ಮತ್ತೆ ದಾಳಿ ಮಾಡಬಹುದು. ಹೀಗಾಗಿ ಭಾರತದಲ್ಲೂ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆದರೆ ಯಾವುದೇ ಸ್ಥಿತಿಯನ್ನೂ ಎದುರಿಸಲು ಸಜ್ಜಾಗಿರುವಂತೆ ರಾಜ್ಯ ಸರ್ಕಾರಗಳಿಗೆ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಇಲಾಖೆ ಸಂದೇಶ ಕಳುಹಿಸಿದೆ.
ಭಾರತದ ಕೆಲ ರಾಜ್ಯಗಳಲ್ಲಿ ಕೆಲವು ಯುವಕರು ಇಸಿಸ್ನತ್ತ ಆಕರ್ಷಿತರಾಗುತ್ತಿದ್ದುದು ಈಗಾಗಲೇ ಬೆಳಕಿಗೆ ಬಂದಿದೆ. ಸ್ಥಳೀಯರನ್ನೇ ಬಳಸಿಕೊಂಡು ಉಗ್ರರು ದುಷ್ಕೃತ್ಯ ನಡೆಸಬಹುದು ಎಂಬ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಿಗೂ ಮುನ್ನೆಚ್ಚರಿಕಾ ಸಂದೇಶ ರವಾನಿಸಲಾಗಿದೆ. ಉಗ್ರರ ಚಟುವಟಿಕೆ ಕುರಿತು ಮಾಹಿತಿ, ಸೂಕ್ಷ್ಮ ಪ್ರದೇಶಗಳು, ಕೆಲ ಸಂಘಟನೆಗಳ ಮೇಲೆ ನಿಗಾ ಹಾಗೂ ದಾಳಿಯನ್ನು ತಡೆಯುವ ಕ್ರಮಗಳ ಬಗ್ಗೆ ಮುಂದಾಲೋಚಿಸುವಂತೆ ತಿಳಿಸಲಾಗಿದೆ.
ಇಸಿಸ್ ಮೇಲೆ ದಾಳಿ ಮಾಡುತ್ತಿರುವ ದೇಶಗಳಾದ ಫ್ರಾನ್ಸ್, ಅಮೆರಿಕ, ಬ್ರಿಟನ್, ಜರ್ಮನಿ, ರಷ್ಯಾ, ಆಸ್ಟ್ರೇಲಿಯಾದ ಭಾರತದಲ್ಲಿನ ರಾಯಭಾರ ಕಛೇರಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.