ಬೆಳ್ತಂಗಡಿ : ಶ್ರೀರಾಮ ಕಾರುಣ್ಯ ಕಲಾ ಸಂಘ ಸಂಘ ಕನ್ಯಾಡಿ ಧರ್ಮಸ್ಥಳ ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅನುಗ್ರಹ ಮಾರ್ಗದರ್ಶನದಲ್ಲಿ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ, ಹಾಗೂ ಶ್ರೀ ನಿರಂಜನ ಸ್ವಾಮೀಜಿಯವರ ಸಂಸ್ಮರಣೆ, ಸಾಧಕರಿಗೆ ಗೌರವಾರ್ಪಣೆ ಯಕ್ಷ ಕಲೋತ್ಸವ-2015 ಕಾರ್ಯಕ್ರಮ ನ. 10 ರಂದು ಸಂಜೆ 5 ಗಂಟೆಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣೀಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನದಲ್ಲಿ ನಡೆಯಲಿದೆಎಂದು ಕಲಾ ಸಂಘದ ಸಂಚಾಲಕ ದಯಾನಂದ ಪಿ. ಬೆಳಾಲು ತಿಳಿಸಿದರು.ಅವರು ಬೆಳ್ತಂಗಡಿ ವಾರ್ತಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮಗಳ ವಿವರ ನೀಡಿದರು.
ನ. 10 ರಂದು ಸಂಜೆ 5 ಗಂಟೆಗೆದೇವರ ಚೌಕಿ ಪೂಜೆ ನಡೆಯಲಿದೆ.ಬಳಿಕ ರಾತ್ರಿ 8 ಗಂಟೆಯ ವರೆಗೆಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಸತ್ವ ಪರೀಕ್ಷೆಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಬಳಿಕ ಸಭಾಕಾರ್ಯಕ್ರಮವನ್ನು ಉದ್ಯಮಿ ವೈ.ನಾಣ್ಯಪ್ಪ ಪೂಜಾರಿ ಉದ್ಘಾಟನೆ ಮಾಡಲಿದ್ದಾರೆ.ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಶಾಸಕ ಕೆ.ವಸಂತ ಬಂಗೇರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಸಚಿವಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ಸುನೀಲ್ಕುಮಾರ್, ಮಾಜಿ ಶಾಸಕ ವಿಟ್ಲ ರುಕ್ಮಯ್ಯ ಪೂಜಾರಿ, ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಶ್ರೀ ಕ್ಷೇತ್ರ ಸಂಕದಕಟ್ಟೆಯ ನಾರಾಯಣ ನಿರಂಜನ, ಅಖಿಲ ಭಾರತ ಬಿಲ್ಲವರ ಯೂನಿಯನ್ನ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ಶ್ರೀ ಗು.ನಾ.ಸ್ವಾ.ಸೇ. ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ, ಉದ್ಯಮಿ ರಮಾನಂದ ಸಾಲ್ಯಾನ್ ಮೊದಲಾದವರು ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮೀಜಿಯವರ ಸಂಸ್ಮರಣೆ ನಡೆಯಲಿದ್ದು ಕೆ.ವಸಂತ ಸಾಲಿಯಾನ್ ಕಾಪಿನಡ್ಕ ಇವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ತಿಮ್ಮಪ್ಪ ಗುಜರನ್ ಅವರನ್ನು ಸನ್ಮಾನಿಸಲಾಗುವುದು. ಜನಪದ ವಿದ್ವಾಂಸ ಉಗ್ಗಪ್ಪ ಪೂಜಾರಿ ಅವರನ್ನು ಗೌರವಿಸಲಾಗುವುದು. ಶಿವರಾಮ ಪಣಂಬೂರು ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.
ಬಳಿಕ ರಾತ್ರಿ 10 ಗಂಟೆಗೆ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಶ್ರೀ ಕೃಷ್ಣ ಲೀಲಾಮೃತ (ಕನ್ನಡ) ಹಾಗೂ ಮಲೆತ ಬೊಲ್ಪು (ತುಳು) ಯಕ್ಷಗಾನ ಬಯಲಾಟ ನಡೆಯಲಿದೆ. ಅತಿಥಿ ಕಲಾವಿದರಾಗಿ ಶ್ರೀಕೃಷ್ಣ ಲೀಲಾಮೃತದಲ್ಲಿ ತುಳು ಚಿತ್ರನಟ ಅರವಿಂದ ಬೋಳಾರ್ ಹಾಗೂ ಮಲೆತ ಬೊಲ್ಪು ಪ್ರಸಂಗದಲ್ಲಿ ತುಳು ಚಿತ್ರನಟರಾದ ನವೀನ್ ಪಡೀಲ್, ಬೋಜರಾಜ್ ವಾಮಂಜೂರು ಹಾಗೂ ಸುರೇಶ್ ಮಂಜೇಶ್ವರ ಭಾಗವಹಿಸಲಿದ್ದಾರೆ.
ತಾಳಮದ್ದಲೆ ಹಾಗೂ ಯಕ್ಷಗಾನ ಬಯಲಾಟದಲ್ಲಿ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಬೈಂದೂರು ಕೃಷ್ಣಯ್ಯ, ದಯಾನಂದ ಕೋಡಿಕಲ್, ದಯಾನಂದ ಪಾವೂರು, ಪಡ್ರೆ ಶ್ರೀಧರ, ಕೃಷ್ಣಪ್ಪಕಿನ್ಯ, ಪ್ರಕಾಶ್ ವಿಟ್ಲ ಮೊದಲಾದವರು ಹಿಮ್ಮೇಳದಲ್ಲಿ ಭಾಗವಹಿಸುತ್ತಿದ್ದು, ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ, ಸೀತಾರಾಮ್ ಕುಮಾರ್, ಉಜಿರೆ ನಾರಾಯಣ, ಶಿವರಾಮ ಪಣಂಬೂರು, ಪ್ರಭಾಕರ ಸುವರ್ಣ, ಚಂದ್ರಶೇಖರ ಧರ್ಮಸ್ಥಳ, ಪಂಜಗುಡ್ಡಪ್ಪ ಸುವರ್ಣ, ಮೋಹನ್ಅಮ್ಮುಂಜೆ, ಸುರೇಶ್ ಕುಪ್ಪೆಪದವು, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ರಮೇಶ್ ಕುಲಶೇಖರ, ಅಕ್ಷಯ್ ಮಾರ್ನಾಡು, ಶಶಿ ಪಡುಕೋಣೆ, ರಾಮಚಂದ್ರ ಮುಕ್ಕ ಮೊದಲಾದಕಲಾವಿದರು ಮುಮ್ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದರು.ಗೋಷ್ಠಿಯಲ್ಲಿ ಕಲಾ ಸಂಘದ ಅಧ್ಯಕ್ಷ ದಯಾನಂದ ಪಾವೂರು, ಸದಸ್ಯ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.