ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಮುಕ್ತವಾಗಿಸಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ದೇವಚಳ್ಳ ಗ್ರಾಮಪಂಚಾಯತ್ ಗ್ರಾಮಸಭೆ ಅಧ್ಯಕ್ಷ ದಿವಾಕರ ಮುಂಡೋಡಿ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ಗ್ರಾಮದಲ್ಲಿ ಬಾಲಕಾರ್ಮಿಕ ಪದ್ಧತಿ ಇರಲೇಬಾರದು, ಇದಕ್ಕಾಗಿ ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಬಾಲಕಾರ್ಮಿಕ ಮುಕ್ತವಾಗಿಸಬೇಕು. ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕುವಂತಾಗಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಇದೇ ವೇಳೆ ಕಂದ್ರಪ್ಪಾಡಿ ವಾಲ್ತಾಜೆ ರಸ್ತೆ ಅಭಿವೃದ್ಧಿ ಬಗ್ಗೆ ಸಾರ್ವಜನಿಕರು ಬೇಡಿಕೆ ಇರಿಸಿದ್ದರು, ಈ ರಸ್ತೆಗೆ ಈಗಾಗಲೇ ಶಾಸಕರ ಅನುದಾನದಿಂದ ೧೦ ಲಕ್ಷ ರೂಪಾಯಿ ಲಭ್ಯವಾಗಲಿದೆ.ಉಳಿದಂತೆ ಆದ್ಯತೆಯ ಮೇರೆಗೆ ಅನುದಾನ ಮೀಸಲಿಡಲು ನಿರ್ಧರಿಸಲಾಯಿತು.
ಮಾವಿನಕಟ್ಟೆ ಬಸ್ ನಿಲ್ದಾಣದ ಬಳಿ ರಸ್ತೆ ಅಗಲೀಕರಣದ ವೇಳೆ ನೀರಿನ ಪೈಲ್ ಒಡೆದಿತ್ತು, ಇದೀಗ ಮರುಜೋಡಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.ಕಂದ್ರಪ್ಪಾಡಿ ಕುಂಬಾರಕೇರಿ ಪ್ರದೇಶಕ್ಕೆ ಕುಡಿಯುವ ನೀರಿನ ಯೋಜನೆಗೆ ಬೇಡಿಕೆ ವ್ಯಕ್ತವಾಯಿತು.ಈ ಪ್ರದೇಶಕ್ಕೆ ಜಿಪಂ ಸದಸ್ಯರ ಅನುದಾನ ಈಗಾಗಲೇ ನಿಗದಿ ಮಡಲಾಗಿದೆ, ಉಳಿದಂತೆ ಪಂಚಾಯತ್ ಅನುದಾನ ಬಳಕೆ ಮಾಡಲು ಸೂಚಿಸಲಾಯಿತು.ಇದೇ ವೇಳೆ ವಿವಿಧ ಇಲಾಖಾ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.