ಬೆಳ್ತಂಗಡಿ : ಹಿಂದುಳಿದ ವರ್ಗದ ಅಭಿವೃದ್ಧಿಗೆ ಚುನಾವಣಾ ಸಂದರ್ಭ ನೀಡಿದ ಭರವಸೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರಕಾರವು ಹಿಂದುಳಿದ ವರ್ಗದವರಿಗೆ, ಪ. ಜಾತಿ ಪ. ಪಂಗಡದವರಿಗೆ ಯಾವುದೇ ಸಹಾಯ ಸೌಲಭ್ಯ ನೀಡದೆ ವಂಚಿಸಿದೆ. ಇದನ್ನು ಪ್ರತಿಭಟಿಸಿ ನ. ೨ ರಂದು ಮಂಗಳೂರಿನ ಸಂಘನಿಕೇತನದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದುಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಪದ್ಮನಾಭಕೊಟ್ಟಾರಿ ಪ್ರಕಟಿಸಿದರು.ಅವರು ಬೆಳ್ತಂಗಡಿ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಸರಕಾರದ ವಂಚನೆಯ ಆಟ ಇಲ್ಲಿಗೆಕೊನೆಗಾಣಬೇಕು.ಹಿಂದುಳಿದ ವರ್ಗದವರಿಗೆ ಪ. ಜಾತಿ ಪ. ಪಂಗಡದವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೌಲಭ್ಯ ಸಿಗಬೇಕು ಎಂಬ ದೃಷ್ಠಿಯಿಂದ ಭಾರತೀಯಜನತಾ ಪಾರ್ಟಿಯ ಹಿಂದುಳಿದ ವರ್ಗ, ಪ. ಜಾತಿ ಪ. ಪಂಗಡ ಮೋರ್ಚಾದಿಂದ ಈ ಸಮಾವೇಶ ನಡೆಸಲಾಗುತ್ತಿದೆ. ಬಜೆಟ್ನಲಿ ಘೋಷಣೆ ಮಾಡಿದ ಅನುದಾನವನ್ನು ಬಳಕೆ ಮಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾ ಸರಕಾರದ ತಪ್ಪನ್ನು ಜನರ ಮುಂದೆ ಮರೆಮಾಚಲು ಯತ್ನಿಸುತ್ತಿದೆ ಎಂದರು. ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳಿಗೆ ಕೊಡುತ್ತಿರುವ ಅಕ್ಕಿಯನ್ನು ಕೇಂದ್ರ ಸರಕಾರ 29 ರೂ.ಗಳಿಗೆ ಖರೀದಿಸಿ ನೀಡುತ್ತಿದ್ದು ಇದನ್ನು ರಾಜ್ಯ ಸರಕಾರ ನೀಡಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದೆ.
ಹಲವಾರು ಭಾಗ್ಯಗಳನ್ನು ಘೊಷಣೆ ಮಾಡುವುದಲ್ಲದೆ ಸರಿಯಾದ ಯೊಜನೆಗಳನ್ನು ಅನುಷ್ಠಾನಗೊಳಿಸಲು ಸರಕಾರ ವಿಫಲವಾಗಿದೆ. ಗ್ರಾಮ ಸಹಾಯಕರಿಗೆ ಕಳೆದ 4 ತಿಂಗಳಿಂದ ವೇತನ ನೀಡದೆ ಸರಕಾರ ವಂಚಿಸುತ್ತಿದ್ದು ಗ್ರಾಮ ಸಹಾಯಕರು ಹೆಚ್ಚಿನವರು ಬಡ ಹಾಗೂ ಹಿಂದುಳಿದ ಕುಟುಂಬದಿಂದ ಬಂದವರಾಗಿದ್ದಾರೆ. ಈ ರೀತಿ ವೇತನ ನೀಡದೆ ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಅನ್ಯಾಯ ಮಾಡುತ್ತಿರುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಈ ರೀತಿಯರಾಜ್ಯ ಸರಕಾರದ ದುಸ್ಥಿತಿಯನ್ನು ಮನಗಂಡು ಸರಕಾರಕ್ಕೆ ಎಚ್ಚರಿಕೆ ನೀಡಲು ಹಾಗೂ ಜನರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದ ಅವರು ರಸ್ತೆಗಳ ದುಸ್ಥಿತಿಯನ್ನು ಕಂಡಾಗ ಸರಕಾರ ಇದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತಪಡಿಸಿದರು.
ನ. ೨ ರಂದು ನಡೆಯುವ ಸಮಾವೇಶಕ್ಕೆ ಪಕ್ಷದ ಮುಖಂಡರುಗಳಾದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಗೋವಿಂದ ಖಾರಜೋಳ, ಅರವಿಂದ ಲಿಂಬಾವಳಿ, ರೇವು ನಾಯ್ಕ್ ಬೆಳಮಳಗಿ ಹಾಗೂ ಇತರ ಮುಖಂಡರುಗಳು ಭಾಗವಹಿಸಲಿದ್ದಾರೆ. ಸುಮಾರು ೧೫೦೦ಕ್ಕೂ ಅಧಿಕಜನ ಭಾಗವಹಿಸಲಿದ್ದು ಬೆಳ್ತಂಗಡಿ ತಾಲೂಕಿನಿಂದ ೫೦೦ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲು ನಿರ್ದರಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಜಿಲ್ಲಾ ಬಿಜೆಪಿ ಯುವ ಮೋರ್ಚಾಅಧ್ಯಕ್ಷ ರಂಜನ್ ಜಿ. ಗೌಡ, ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ತಾ.ಪಂ.ಸದಸ್ಯ ಸಂತೋಷ್ ಕುಮಾರ್ ಲಾಯಿಲಾ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಕಾಸ್ ಪುತ್ತೂರು, ತಾಲೂಕು ಬಿಜೆಪಿ ಪ. ಜಾತಿ ಮೋರ್ಚಾ ಅಧ್ಯಕ್ಷ ಲಿಂಗಪ್ಪ ನಾಯ್ಕ್, ತಾಲೂಕು ಬಿಜೆಪಿ ಪ. ಪಂಗಡ ಮೋರ್ಚಾ ಅಧ್ಯಕ್ಷ ರಾಘವಕಲ್ಮಂಜ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೀತಾರಮ್ ಬಿ.ಎಸ್, ಜಿ. ಪಂ.ಸದಸ್ಯೆ ತುಳಸಿ ಹಾರಬೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.